ಶನಿವಾರಸಂತೆ ಮಾ. 3:ಹಾಸನದಲ್ಲಿ ವಿದ್ಯುತ್ ದುರಸ್ತಿ ಕಾರ್ಯ ಹಮ್ಮಿಕೊಂಡಿರುವ ಕಾರಣ ತಾ. 5ರಂದು ಶನಿವಾರಸಂತೆ ಹೋಬಳಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಹೋಬಳಿ ವ್ಯಾಪ್ತಿಯ ಶನಿವಾರಸಂತೆ ಹೆಮ್ಮನೆ, ಚಿಕ್ಕಕೊಳತ್ತೂರು, ಬಿದರೂರು, ಅಪ್ಪಶೆಟ್ಟಳ್ಳಿ, ಕಾಜೂರು, ಕೊಜಗೇರಿ, ಮಾದ್ರೆ, ಬಿಳಾಹ, ಬೆಂಬಳೂರು, ಕೊಡ್ಲಿಪೇಟೆ, ಗುರುಗಳೆ, ಮೂದ್ರವಳ್ಳಿ, ಹಂಡ್ಲಿ, ಸಂಪಿಗೆದಾಳು, ನಿಡ್ತ, ಮುಳ್ಳೂರು, ಹಿತ್ತಲಕೇರಿ, ಗೌಡಳ್ಳಿ, ಬೀಡಿಕಟ್ಟೆ, ಹಿರಿಕರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಶಾಖಾಧಿಕಾರಿ ಹೇಮಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.