ಶನಿವಾರಸಂತೆಯಿಂದ 12 ಕಿ. ಮಿ ದೂರದ ಮಾಲಂಬಿ ಬೆಟ್ಟದಲ್ಲಿರುವ ಮಳೆಮಲ್ಲೇಶ್ವರ ದೇವಾಲಯ ಮಾ 4 ರ ಶಿವರಾತ್ರಿಗೆ ಸಜ್ಜಾಗಿದೆ.
ಕೊಡಗಿನ 7 ಸಾವಿರ ಸೀಮೆಬೆಟ್ಟ ಸಾಲುಗಳಲ್ಲಿ ಮಾಲಂಬಿ ಬೆಟ್ಟ ಮೂರನೇ ಅತಿ ಎತ್ತರವಾದ ಬೆಟ್ಟವೆನಿಸಿದೆ. ಕೊಡಗಿನ ಬೆಡಗಿನ ಬೆಟ್ಟಗಳ ಸಾಲಿನಲ್ಲಿ ಬರುವ ಈ ಸ್ಥಳ ಐತಿಹಾಸಿಕ ಮಹತ್ವ ಪಡೆದಿದೆ. ಸೊಮವಾರ ಪೇಟೆ ತಾಲೂಕಿನಲ್ಲಿ ಪುಷ್ಪÀ್ಪಗಿರಿ ಬೆಟ್ಟವನ್ನು ಬಿಟ್ಟರೆ ಮಾಲಂಬಿ ಬೆಟ್ಟ ಎರಡನೆಯ ಅತಿ ಎತ್ತರದ ಬೆಟ್ಟ. ಹೀಗಾಗಿ ಈ ಬೆಟ್ಟ ಶಿವರಾತ್ರಿಗೆ ಮಾತ್ರವಲ್ಲ ಪ್ರವಾಸೋದ್ಯಮ ದೃಷ್ಠಿಯಿಂದಲೂ ಮಹತ್ವ ಪಡೆದಿದ್ದು ಚಾರಣಿಗರಿಗೆ ಅತ್ಯಂತ ಪ್ರಿಯವಾದ ತಾಣವಾಗಿದೆ.
5,494 ಅಡಿ ಎತ್ತರದ ಇದರ ತುದಿಗೆ ಹೋಗಿ ನಿಂತರೆ ಸುತ್ತಲಿನ ಕಾಫಿ ತೋಟದ ಐಸಿರಿ ಮನ ತಣಿಸುತ್ತದೆ. ಬೆಟ್ಟದ ತುದಿಯಲ್ಲಿ ಕಟ್ಟಿರುವ ಮಳೆಮಲ್ಲೇಶ್ವರ ದೇವಾಲಯ ಬೆಟ್ಟಕ್ಕೆ ಕಿರೀಟವಿಟ್ಟಂತೆ ಕಂಗೊಳಿಸುತ್ತದೆ.
1830 ರಿಂದ ಮಾಲಂಬಿ ಬೆಟ್ಟದ ಮೆಲೆ ಮಲೆಮಲ್ಲೇಶ್ವರನಿಗೆ ಪೂಜಾ ಕಾರ್ಯಗಳನ್ನ ಕೈಗೊಳ್ಳಲಾಗುತ್ತಿದೆ. ಕೊಡಗನ್ನು ವೀರಶೈವ ದೊರೆಗಳು ಆಳಿದ ಕಾರಣ ಶಿವನ ಆರಾಧನೆಯೇ ಇಲ್ಲಿ ಅಧಿಕವಾಗಿದೆ. ಮಳೆ ಮಲ್ಲೇಶ್ವರ ಗುಡಿ ಕೂಡ ಇದರಲ್ಲಿ ಒಂದು.
ಹಿಂದೊಮ್ಮೆ ಜಿಲ್ಲೆಯಲ್ಲಿ ಭೀಕರ ಕ್ಷಾಮ ಆವರಿಸಿಕೊಂಡಾಗ ಹಾಸನ ಜಿಲ್ಲೆಯ ಅರಕಲಗೋಡಿನಿಂದ ಶಿವನು ಮಲ್ಲೇಶ್ವರಕ್ಕೆ ಬಂದು ನೆಲೆಸಿದ ಎಂಬುದು ಪುರಾಣ ಕಥೆ, ಆಗ ಮಳೆಯಾಗಿದ್ದರಿಂದ ಈ ದೇವರಿಗೆ ‘ಮಳೆ ಮಲ್ಲೇಶ್ವರ’ ಎಂಬ ಹೆಸರು ಬಂದಿತೆಂಬ ಪ್ರತೀತಿ ಇದೆ. ಹೀಗಾಗಿ ಮಹಾಶಿವರಾತ್ರಿಯಂದು ಇಲ್ಲಿ ವಿವಿಧ ಪೂಜಾ ಕಾರ್ಯಗಳು. ಅನ್ನಸಂತರ್ಪಣೆ ನಡೆಯುತ್ತದೆ. ಜಿಲ್ಲೆ ಹಾಗೂ ನೆರೆ ಜಿಲ್ಲೆಗಳಿಂದಲೂ 15 ಸಾವಿರಕ್ಕೂ ಅಧಿಕ ಭಕ್ತರು ಬಂದು ಮುಂಜಾನೆಯಿಂದಲೇ ಬೆಟ್ಟವೇರುವದು ವಿಶೆÉೀಷ. ಬೆಟ್ಟ ಇಳಿದು ಬರುತ್ತಿರುವಂತೆ ತುಂತುರು ಮಳೆ ಸುರಿಯುತ್ತದೆ. 1999ರಲ್ಲಿ ದಾನಿಗಳು ಹಾಗೂ ಕಾಫಿ ಬೆಳೆಗಾರರು ಸೇರಿ ರೂ. 10 ಲಕ್ಷ ವೆಚ್ಚದಲ್ಲಿ ಬೆಟ್ಟದ ತುದಿಯಲ್ಲಿನ ಗುಡಿಯನ್ನು ಜೀರ್ಣೋದ್ದಾರ ಮಾಡಿಸಿದರು. 2006ರಲ್ಲಿ ಪ್ರವಾಸೋದ್ಯಮ ಇಲಾಖೆಗೆ ಮಾಲಂಬಿಯ ಮಳೆಮಲ್ಲೇಶ್ವರ ಬೆಟ್ಟವನ್ನು ಸೇರಿಸಲಾಗಿದೆ. 2012-13ರ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆಯು ರೂ 68 ಲಕ್ಷ ವೆಚ್ಚದಲ್ಲೆ ಬೆಟ್ಟ ಅಬಿವೃದ್ಧಿ ಪಡಿಸಿದೆ. ಮಾಲಂಬಿ ಬೆಟ್ಟದಲ್ಲಿ ಮಾ. 4 ರಂದು ಬೆಳಿಗ್ಗೆಯಿಂದಲೇ ವಿಶೆÉೀಷ ಪೂಜೆಗಳು ನಡೆಯಲಿವೆ. ಸಾರ್ವಜನಿಕರು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಭಕ್ತರಿಗೆ ಅನ್ನ ಸಂvರ್ಪಣೆ ನಡೆಯಲಿದೆ ಎಂದು ಮಳೆಮಲ್ಲೇಶ್ವರ ದೇವಾಲಯ ಸಮಿತಿ ತಿಳಿಸಿದೆ.
ನಾಳೆ ಗವಿಸಿದ್ಧೇಶ್ವರ ಜಾತ್ರೆ
ಕೊಡಗಿನ ಗಡಿ ಭಾಗವಾದ ಬೆಸೂರು ಪಂಚಾಯಿತಿ ವ್ಯಾಪ್ತಿಯ ಆಗಳಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಗವಿ ಸಿದ್ಧೇಶ್ವರ ಜಾತ್ರೆ ಮಾ. 5 ರಂದು ನಡೆಯಲಿದೆ ಪ್ರತಿ ವರ್ಷ ಮಹಾಶಿವರಾತ್ರಿ ಮಾರನೇ ದಿನ ನಡೆಯುವ ಈ ಜಾತ್ರೆಗೆ ವಿವಿಧೆಡೆಗಳಿಂದ ಭಕ್ತರು ಆಗಮಿಸುತ್ತಾರೆ.
ಸುಮಾರು 500 ವರ್ಷಗಳ ಹಿಂದೆ ವೀರರಾಜನ ಆಳ್ವಿಕೆ ಕಾಲದಲ್ಲಿ ಈ ಸ್ಥಳಕ್ಕೆ ಮುಳ್ಳೂರು ಎಂಬ ಹೆಸರಿತ್ತು ಗ್ರಾಮದಲ್ಲಿ ಕೇವಲ ಐವರು ಶಿವಶರಣರ ಮನೆಗಳು ಇದ್ದು, ಗೊಂಡಾರಣ್ಯದಂತಿದ್ದ ಈ ಗ್ರಾಮದಲ್ಲಿ ಹುಲಿ, ಚಿರತೆ ಹಾಗೂ ಕಾಡಾನೆಗಳು ಇದ್ದವು ಗ್ರಾಮದ ಗವಿಸಿದ್ದೇಶ್ವರ ಎಂಬ ಸಾಧು ಬೃಹದಾಕಾರದ ಗವಿಯೊಳಗೆ ವಾಸವಾಗಿದ್ದು, ತಪಸ್ಸು ಭಿಕ್ಷಾಟನೆ ಮಾಡುತ್ತಲೇ ಮೃತನಾದ. ಮುಕ್ತಿ ಕರುಣಿಸಲು ಶಿವಕೈಲಾಸದಿಂದ ಬರುವ ಮೊದಲೇ ಸಾಧುವಿನ ಕೊರಳ ಕರಡಿಯ ಮುಚ್ಚಳ ಕಳಚಿ ಲಿಂಗ ಭೂ ಸ್ಪರ್ಶವಾಯಿತು. ಭಕ್ತಿಗೆ ಮಾರು ಹೋದ ಶಿವ ಅಲ್ಲಿಯೇ ನಿಂತ ಬ್ರಹ್ನಾಂಡವಾದ ಎನ್ನುತ್ತಾರೆ ಹಿರಿಯರು.
ರಾಜವೀರರಾಜ ತನ್ನ ಆಳ್ವಿಕೆಗೆ ಒಳಪಟ್ಟ ನೆಲದ ವಿಸ್ತೀರ್ಣ ಗುರುತಿಸಿ ಗಡಿಕಲ್ಲನ್ನು ಪ್ರತಿಷ್ಠಾಪಿಸಿಸಲು ತನ್ನಲ್ಲಿದ್ದ ಅಶ್ವದಳ ಕಾಲಾಳುಗಳನ್ನು ಕಳುಹಿಸಿದ್ದು ಸುತ್ತಾಡಿದ ರಾಜನ ದಂಡು ಆಯಾಸಗೊಂಡು ಮುಳ್ಳೂರಿನಲ್ಲಿ ಕುದುರೆಗಳನ್ನು ಕಟ್ಟಿ ಹಾಕಿ ಮರದ ಕೆಳಗಡೆ ಮಲಗಿದರು. ದಳಪತಿ ಗುಹೆಯೊಳಗೆ ಮಲಗಿದ್ದು ಕನಸೊಂದು ಬಿದ್ದು ಇಲ್ಲಿ ನನಗೊಂದು ಕೊಳವನ್ನು ನಿರ್ಮಿಸು ನಿನಗೂ ಸೈನ್ಯಕ್ಕೂ ಮತ್ತು ನಿನ್ನ ರಾಜವಂಶಕ್ಕೂ ಒಳ್ಳೆಯದಾಗುತ್ತದೆ ಎಂಬ ವಾಣಿ ಕೇಳಿಬಂತು. ಆ ಕನಸಿನ ವಿಚಾರ ರಾಜನಿಗೂ ತಿಳಿಸಿದ. ವೀರರಾಜ ಕುದುರೆ ಸಾರೋಟಿನಲ್ಲಿ ಬಂದು ಆ ಗುಹೆಯಲ್ಲಿ ಮಲಗಿ ನಿದ್ರಿಸುವಾಗ ರಾಜನ ಕನಸಿನಲ್ಲಿಯು ಸಹ ಶಿವಲಿಂಗ ದರ್ಶನ ಕಂಡು ಆ ಕೂಡಲೇ ರಾಜನ ಆಜ್ಷೆಯಂತೆ ಸೈನ್ಯವು ಒಂದೇ ರಾತ್ರಿಯಲ್ಲಿ ಕೊಳ ನಿರ್ಮಿಸಿತು. ಕಲ್ಲುಗಳ ಮೇಲೆ ದಂಡಿನ ಭಾವಿ ಧಳವಾಯಿ ಕೆರೆ ಎಂದು ನಾಮಕರಣ ಮಾಡಲಾಯಿತು. ಲಿಂಗ ರೂಪಿ ಭಗವಂತ ರಾಜನಿಗೆ ತಿಳಿಸಿದ ಪ್ರಕಾರ ಕೊಳದಲ್ಲಿ 365 ದಿನಗಳಲ್ಲಿಯು ಸದಾ ನೀರು ತುಂಬಿ ತುಳುಕುತ್ತಿತ್ತು. ಆ ಕೊಳದಲ್ಲಿ ಪ್ರತಿ ಮಾಸದ ಅಮವಾಸೆ ಕೃಷ್ಣ ಪಕ್ಷದ ಮಧ್ಯರಾತ್ರಿಯಲ್ಲಿ ಶಂಖ ಮತ್ತು ಜಾಗಟೆಯ ಸದ್ದು ಕೇಳಿ ಬರುತ್ತಿದ್ದು, ಭಗವಂತ ತಾನಿರುವ ಗೋಚರವನ್ನು ಭಕ್ತರಿಗೆ ತೋರಿಸುತ್ತಿದ್ದನಂತೆ. 1984ರಲ್ಲಿ ಅರಣ್ಯ ಇಲಾಖೆಯು ನರ್ಸರಿ ಬೆಳೆಸಲು ಹಾಗೂ ತೇಗದ ಕಾಡನ್ನು ನಿರ್ಮಿಸಲು ಕೊಳದ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿತು ಎನ್ನಲಾಗಿದೆ. ಅಂದಿನಿಂದ ಶಂಖ ಜಾಗಟೆಯ ಶಬ್ದ ನಿಂತು ಹೋಯಿತು ಎಂದು ಹೇಳುತ್ತಾರೆ. ಕ್ರಮೇಣ ಮುಳ್ಳೂರು ಹೆಸರು ಹೋಗಿ ಆಗಳಿ ಎಂಬ ಹೆಸರು ಬಂತು. ಗ್ರಾಮದ ಪಟೇಲ್ ಹಾಗೂ ಜಮೀನ್ದಾರ್ ಸಿದ್ದಯ್ಯ ಅವರು ಬಂಡೆಗಳಲ್ಲಿನ ಗವಿಯನ್ನು ಅಲ್ಪ ಸ್ವಲ್ಪ ಕೆತ್ತಿಸಿ ಬಾಗಿಲು - ಕಿಟಕಿ ನಿರ್ಮಿಸಿದ್ದಾರೆ. 1987ರಿಂದ ಪಂಚಾಯಿತಿ ಹಾಗೂ ಗ್ರಾಮಸ್ಥರು ಪ್ರತಿ ಶಿವರಾತ್ರಿ ಹಬ್ಬದ ಮಾರನೇ ದಿನ ಗವಿಸಿದ್ದೇಶ್ವರ ಸ್ವಾಮಿಗೆ ಅಭಿಷೇಕ ಪೂಜೆ ಹಾಗೂ ಜಾತೆÀ್ರ ನಡೆಸುತ್ತಾರೆ. ಮಾರ್ಚ್ 5 ರಂದು ಗವಿಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಜೊತೆ ಜಾತ್ರೆಯು ನಡೆಯುತ್ತದೆ.
- ನರೇಶ್ಚಂದ್ರ,
ಶನಿವಾರಸಂತೆಸುಮಾರು 500 ವರ್ಷಗಳ ಹಿಂದೆ ವೀರರಾಜನ ಆಳ್ವಿಕೆ ಕಾಲದಲ್ಲಿ ಈ ಸ್ಥಳಕ್ಕೆ ಮುಳ್ಳೂರು ಎಂಬ ಹೆಸರಿತ್ತು ಗ್ರಾಮದಲ್ಲಿ ಕೇವಲ ಐವರು ಶಿವಶರಣರ ಮನೆಗಳು ಇದ್ದು, ಗೊಂಡಾರಣ್ಯದಂತಿದ್ದ ಈ ಗ್ರಾಮದಲ್ಲಿ ಹುಲಿ, ಚಿರತೆ ಹಾಗೂ ಕಾಡಾನೆಗಳು ಇದ್ದವು ಗ್ರಾಮದ ಗವಿಸಿದ್ದೇಶ್ವರ ಎಂಬ ಸಾಧು ಬೃಹದಾಕಾರದ ಗವಿಯೊಳಗೆ ವಾಸವಾಗಿದ್ದು, ತಪಸ್ಸು ಭಿಕ್ಷಾಟನೆ ಮಾಡುತ್ತಲೇ ಮೃತನಾದ. ಮುಕ್ತಿ ಕರುಣಿಸಲು ಶಿವಕೈಲಾಸದಿಂದ ಬರುವ ಮೊದಲೇ ಸಾಧುವಿನ ಕೊರಳ ಕರಡಿಯ ಮುಚ್ಚಳ ಕಳಚಿ ಲಿಂಗ ಭೂ ಸ್ಪರ್ಶವಾಯಿತು. ಭಕ್ತಿಗೆ ಮಾರು ಹೋದ ಶಿವ ಅಲ್ಲಿಯೇ ನಿಂತ ಬ್ರಹ್ನಾಂಡವಾದ ಎನ್ನುತ್ತಾರೆ ಹಿರಿಯರು.

ಶನಿವಾರಸಂತೆ