ಶನಿವಾರಸಂತೆ, ಮಾ. 2: ಸಕಲೇಶಪುರ ಕಳಲೆ ಗ್ರಾಮದವ ರಾಗಿದ್ದು, ಶನಿವಾರಸಂತೆಯಲ್ಲಿ ವಾಸವಿದ್ದ ಶಾಲಾ ಶಿಕ್ಷಕಿಯೊಬ್ಬರ ಸ್ಕೂಟರ್‍ವೊಂದು ಅಗ್ನಿಗಾಹುತಿ ಯಾದ ದುರ್ಘಟನೆ ನಡೆದಿದೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಳಲೆ ಗ್ರಾಮದ ಸ.ಹಿ. ಪ್ರಾ.ಶಾಲೆಯ ಶಿಕ್ಷಕಿ ಹೇಮಾವತಿ ರಾಜಶೇಖರ್ ಶನಿವಾರಸಂತೆಯ ಕೆಆರ್‍ಸಿ ವೃತ್ತದ ಸಮೀಪ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದು, ಫೆ.27 ಮತ್ತು 28ರಂದು ಹಾಸನ ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಭಾಗವಹಿಸಲು ಶಾಲೆಗೆ ರಜೆ ಹಾಕಿ, ಶನಿವಾರಸಂತೆಯ ತಮ್ಮ ಬಾಡಿಗೆ ಮನೆಯ ಪಕ್ಕ ಸ್ಕೂಟರ್ ನಿಲ್ಲಿಸಲು ಸ್ಥಳವಿಲ್ಲದ ಕಾರಣ ಪರಿಚಯಸ್ಥರಾದ ವಿರೂಪಾಕ್ಷಯ್ಯ ಎಂಬವರ ಮನೆಯ ಕಾಂಪೌಂಡ್ ಒಳಗಡೆ ಸ್ಕೂಟರ್ ಅನ್ನು ನಿಲ್ಲಿಸಿ ತೆರಳಿದ್ದ ವೇಳೆ ಘಟನೆ ನಡೆದಿದೆ.