ನವದೆಹಲಿ, ಮಾ.1; ಕಳೆದ ಎರಡೂವರೆ ದಿನಗಳ ಹಿಂದೆ ಪಾಕಿಸ್ತ್ತಾನದ ಎಫ್-16 ಯುದ್ಧ ವಿಮಾನವವನ್ನು ಮಿಗ್ -21 ಭಾರತದ ಯುದ್ಧ ವಿಮಾನದ ಮೂಲಕ ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಅಭಿಮಾನ್ ವರ್ಧಮಾನ್ ಅವರು ಇಂದು ರಾತ್ರಿ 9.18 ರ ಬಳಿಕ ಭಾರತದ ನೆಲಕ್ಕೆ ಕಾಲಿಟ್ಟು ಪಾಕಿಸ್ತಾನ ಅವರನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿತು. ಬೆಳಿಗ್ಗೆ 10.30 ರಿಂದಲೇ ಭಾರತದ ಅಭಿಮಾನಿಗಳು ಭಾರತೀಯ ಧ್ವಜದೊಂದಿಗೆ ಸಮರ ವೀರನ ಸ್ವಾಗತಕ್ಕೆ ಕಾಯುತ್ತಿದ್ದರು. ಆದರೆ, ದಾಖಲಾತಿಗಳ ಪರಿಶೀಲನೆ, ವೈದ್ಯಕೀಯ ತಪಾಸಣೆ ನೆಪದಲ್ಲಿ ತಡರಾತ್ರಿ 9.18 ರ ವರೆಗೂ ಬಿಡುಗಡೆ ಪ್ರಕ್ರಿಯೆ ವಿಳಂಬಗೊಂಡಿತು.
ಮಿಗ್ -21 ಬೈಸನ್ ಯುದ್ಧ ವಿಮಾನದ ಪೈಲಟ್ ಅಭಿನಂದನ್ ವರ್ಧಮಾನ್ ಅವರು ಫೆಬ್ರವರಿ 27ರಂದು ಪಾಕ್ ಸೇನೆಯ ಎಫ್-16 ಯುದ್ಧ ವಿಮಾನವನ್ನು ಹೊಡೆದು ರುಳಿಸಿದ್ದಲ್ಲದೆ, ಇತರ ವಿಮಾನಗಳನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ಪಾಕ್ ಸೇನೆಯ ವಶಕ್ಕೆ ಸಿಕ್ಕಿದ್ದರು.
ಇಂದು ತಡ ರಾತ್ರಿ ಸೇನಾ ವಾಹನದಲ್ಲಿ ಅಭಿನಂದನ್ ಅವರನ್ನು ಅಮೃತಸರದ ಕಡೆಗೆ ಭಾರತೀಯ ಸೇನೆಯು ಕರೆದುಕೊಂಡು ಹೋಯಿತು. ಗಡಿಯಲ್ಲಿ ಜೈ ಹಿಂದ್ ಮತ್ತು ಭಾರತ ಮಾತಾ ಕೀ ಜೈ ಘೊಷಣೆಗಳು ಮೊಳಗಿದವು.
ಬಿಎಸ್‍ಎಫ್ ಅಧಿಕಾರಿಗಳು ಅಭಿನಂದನ್ ಅವರನ್ನು ಬರಮಾಡಿ ಕೊಂಡರು. ಬಿಎಸ್‍ಎಫ್ ಅಧಿಕಾರಿ ಗಳು ಅಭಿನಂದನ್ ಅವರನ್ನು ಅಪ್ಪಿಕೊಂಡು ಮರಳಿ ದೇಶಕ್ಕೆ ಸ್ವಾಗತಿಸಿದರು. ಪಾಕಿಸ್ತಾನದ ಸೈನಿಕರ ಕಾವಲು ಹಾಗೂ ಸೈನ್ಯಾಧಿಕಾರಿ ಅವರೊಂದಿಗೆ ವಾಘಾ ಗಡಿಯಲ್ಲಿ ಅಭಿನಂದನ್ ಅವರು ಭಾರತ ಪ್ರವೇಶಿಸಲು ಕಾಯುತ್ತಿದ್ದರು. ರಾತ್ರಿ 9.18 ಹಸ್ತಾಂತರಕ್ಕೆ ಮುನ್ನ ಅಭಿನಂದನ್ ಅವರ ಹಸ್ತಾಂತರಕ್ಕೆ ಚಾಲನೆ ಗೌರವ ದೊಂದಿಗೆ ಪಾಕ್ ಬೀಳ್ಕೊಡುಗೆ ಮಾಡಿತು.
ಪಾಕಿಸ್ತಾನದ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ಇಂದು ಬಿಡುಗಡೆ ಮಾಡುವಾಗ ಅವರನ್ನು ವಾಘಾ ಗಡಿಯಲ್ಲಿ ಸ್ವಾಗತಿಸಲು ಭಾರತೀಯ ವಾಯು ಸೇನೆಯ ಜೊತೆ ಸಹಸ್ರಾರು ಅಭಿ ಮಾನಿಗಳು ನೆರೆದಿದ್ದರು. ಪಾಕಿಸ್ತಾನದ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ಶುಕ್ರವಾರ ಬಿಡುಗಡೆ ಮಾಡಿದ್ದು, ವಾಘಾ ಗಡಿಯ ಮೂಲಕ ಅವರು ಮತ್ತೆ ತಾಯ್ನೆಲ ಪ್ರವೇಶಿಸಿದರು.. ಅಭಿನಂದನ್ ಅವರನ್ನು ಸ್ವಾಗತಿಸಲು ಅವರ ಪೋಷಕರು, ವಾಯು, ಭೂ, ನೌಕಾಸೇನೆಯ ಮುಖ್ಯಸ್ಥರು, ವಾಯುಸೇನೆಯ ಸಿಬ್ಬಂದಿ ಸೇರಿದಂತೆ ಸಾವಿರಾರು ಜನ ವಾಘಾ ಗಡಿಯಲ್ಲಿ ಜಮಾಯಿಸಿದ್ದರು.