ಚೆಟ್ಟಳ್ಳಿ, ಮಾ. 1: ಅಸ್ಪೃಶ್ಯತಾ ನಿವಾರಣಾ ಸಪ್ತಾಹ ಅರಿವು ಜಾಗೃತಿ ಬೀದಿ ನಾಟಕ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ ಮಣಿ ಚಾಲನೆ ನೀಡಿದರು

ಜಿಲ್ಲಾಡಳಿತ, ಜಿಲ್ಲಾ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸಿದ್ದಾಪುರ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಜಿಲ್ಲಾ ವಿದ್ಯಾಸಾಗರ ಕಲಾವೇದಿಕೆ ತಂಡದ ಈ. ರಾಜು ನೇತೃತ್ವದಲ್ಲಿ ಜಾಗೃತಿ ಬೀದಿ ನಾಟಕ ಕಾರ್ಯಕ್ರಮ ನಡೆಯಿತು

ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಸದಸ್ಯೆ ಪ್ರೇಮ, ಸ್ಥಳೀಯರಾದ ಕುಟ್ಟಪ್ಪ, ಪಿ.ಆರ್. ಭರತ್ ಸೇರಿದಂತೆ ಮತ್ತಿತರರು ಇದ್ದರು.