ಮಡಿಕೇರಿ, ಮಾ. 1: ಸುಂಟಿಕೊಪ್ಪ ಗ್ರಾಮ ದೇವರು, ಶ್ರೀ ಚಾಮುಂಡಿ, ಶ್ರೀ ಮುತ್ತಪ್ಪ ದೇವಸ್ಥಾನ ಹಾಗೂ ಗ್ರಾಮ ದೇವರ ಪ್ರತಿಷ್ಠಾಪನಾ ಕಾರ್ಯಕ್ರಮ ತಾ. 8 ರಿಂದ 15 ರವರೆಗೆ ಸುಂಟಿಕೊಪ್ಪದ ಕೆ.ಇ.ಬಿ. ಹಿಂಭಾಗದ ಲಕ್ಷ್ಮಿ ತೋಟದ ಸಮೀಪ, ಸರಕಾರಿ ಆಸ್ಪತ್ರೆಯ ಹಿಂಭಾಗದಲ್ಲಿರುವ ದೇವಾಲಯದಲ್ಲಿ ನೆರವೇರಲಿದೆ.
ತಾ. 7 ರಂದು ಸಂಜೆ 6.30 ಕ್ಕೆ ಗ್ರಾಮ ದೇವರ ಗುಡಿ ಸ್ವೀಕಾರ, 7 ಗಂಟೆಗೆ ಸ್ಥಳ ಶುದ್ಧಿ ಸಪ್ತ ಶುದ್ಧಿ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ವಾಸ್ತುಬಲಿ, ಜಲಾದಿವಾಸ, ಧಾನ್ಯದಿವಾಸ, ದಿಕ್ಪಾಲಕಬಲಿ ನಡೆಯಲಿದೆ.
ತಾ. 8 ರಂದು ಬೆಳಿಗ್ಗೆ 7.30 ಕ್ಕೆ ಸ್ಥಳ ಶುದ್ಧಿ, ಗಣಹೋಮ, ಪ್ರತಿಷ್ಠಾ ಹೋಮ, ನವಕಲಶ ಪ್ರತಿಷ್ಠೆ, 10.26 ಕ್ಕೆ ವೃಷಭ ಲಗ್ನದಲ್ಲಿ ಗ್ರಾಮ ದೇವರ ಪ್ರತಿಷ್ಠೆ, ಕಲಷಾಭಿಷೇಕ, 12 ಗಂಟೆಗೆ ಮಹಾಪೂಜೆ, 12.30 ಕ್ಕೆ ತೀರ್ಥ ಪ್ರಸಾದ ಮಂತ್ರಕ್ಷತೆ ನಂತರ ಅನ್ನಸಂತರ್ಪಣೆ ನೆರವೇರಲಿದೆ. ತಾ. 15 ರಂದು ಬೆಳಿಗ್ಗೆ 10 ಗಂಟೆಗೆ ದೇವಿಗೆ ಹರಕೆ ಸಮರ್ಪಣೆ, ಮಧ್ಯಾಹ್ನ 2 ಗಂಟೆಗೆ ಅನ್ನಸಂತರ್ಪಣೆ ನೆರವೇರಲಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.