ಸುಂಟಿಕೊಪ್ಪ, ಮಾ.1: ಸುಂಟಿಕೊಪ್ಪದ ಶ್ರೀ ಚಾಮುಂಡಿ, ಶ್ರೀ ಮುತ್ತಪ್ಪ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಗ್ರಾಮ ದೇವರ ಪ್ರತಿಷ್ಠಾಪನೆ, ತಾ.7,8 ಮತ್ತು 15 ರಂದು ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೈ.ಎಂ.ಕರುಂಬಯ್ಯ ತಿಳಿಸಿದ್ದಾರೆ.

ಪಟ್ಟಣದ ಕೆ.ಇ.ಬಿ. ಹಿಂಬಾಗ ಲಕ್ಷ್ಮಿ ತೋಟದ ಪಕ್ಕ ಸರ್ಕಾರಿ ಆಸ್ಪತ್ರೆಯ ಹಿಂಬಾಗದಲ್ಲಿರುವ ಸಾವಿರಾರು ವರ್ಷಗಳ ಇತಿಹಾಸವಿರುವ ಗ್ರಾಮದೇವತೆಯ ಪ್ರತಿಷ್ಠಾಪನಾ ಕಾರ್ಯಕ್ರಮವು ನಡೆಯಲಿದೆ.

ತಾ.7 ರಂದು ಸಂಜೆ 6.30 ಗಂಟೆಗೆ ಗ್ರಾಮ ದೇವರ ಗುಡಿ ಸ್ವೀಕಾರ, 7 ಗಂಟೆಗೆ ಸ್ಥಳ ಶುದ್ಧಿ ಸಪ್ತಶುದ್ಧಿ, ವಾಸ್ತುಹೋಮ, ರಾಕ್ಷೋಘ್ನ ಹೋಮ, ವಾಸ್ತುಬಲಿ, ಜಲಾದಿವಾಸ, ಧಾನ್ಯದಿವಾಸ ಇತ್ಯಾದಿ ನಡೆಯಲಿದೆ.

ತಾ.8 ರಂದು 7.30 ಗಂಟೆಗೆ ಶುದ್ಧಿ, ಗಣಹೋಮ, ಪ್ರತಿಷ್ಠಾಹೋಮ, ನವಕಲಶ ಪ್ರತಿಷ್ಠೆ 10.26 ರ ವೃಷಭ ಲಗ್ನದಲ್ಲಿ ಗ್ರಾಮ ದೇವರ ಪ್ರತಿಷ್ಠೆ, ಕಲಶಾಭಿಷೇಕ, 12 ಗಂಟೆಗೆ ಮಹಾಪೂಜೆ, 12.30 ಗಂಟೆಗೆ ತೀರ್ಥಪ್ರಸಾದ ಮಂತ್ರಕ್ಷತೆ, ಅನ್ನ ಸಂತರ್ಪಣೆ ನಡೆಯಲಿದೆ.

ತಾ.15 ರಂದು ಬೆಳಿಗ್ಗೆ ಬೆಳಿಗ್ಗೆ 10 ಗಂಟೆಗೆ ದೇವಿಗೆ ಹರಕೆ ಸಮರ್ಪಣೆ, ಮಧ್ಯಾಹ್ನ 2 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.