ಸೋಮವಾರಪೇಟೆ, ಮಾ. 1: ತಾಲೂಕು ಯುವ ಒಕ್ಕೂಟ ಮತ್ತು ಸೂರ್ಯೋದಯ ಯುವಕ ಸಂಘ ತೋಳೂರುಶೆಟ್ಟಳ್ಳಿ ಇವುಗಳ ಆಶ್ರಯದಲ್ಲಿ ಗ್ರಾಮ ಪಂಚಾಯಿತಿ ಮೈದಾನದಲ್ಲಿ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ ನಡೆಯಿತು. ಉದ್ಯಮಿ ಹರಪಳ್ಳಿ ರವೀಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಅಧ್ಯಕ್ಷೆ ಭಾರತಿ ಉಮೇಶ್, ಯುವಕ ಸಂಘದ ಅಧ್ಯಕ್ಷ ರಂಜನ್, ಉದ್ಯಮಿ ಗಿರೀಶ್ ಮಲ್ಲಪ್ಪ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಚಂದ್ರಿಕ ಇದ್ದರು.