ಕೂಡಿಗೆ, ಫೆ. 28: ಹೆಬ್ಬಾಲೆ ಗ್ರಾಮ ಪಂಚಾಯಿತಿ ವಿಶೇಷ ಗ್ರಾಮ ಸಭೆ ಕಣಿವೆಯ ರಾಮಲಿಂಗೇಶ್ವರ ದೇವಾಲಯ ದ. ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಪಂಚಾಯತಿ ಅಧ್ಯಕ್ಷೆ ಲತಾ ವಹಿಸಿ ದ್ದರು. ಸಭೆಯಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತರಿ ಸಾಮಾಜಿಕ ಲೆಕ್ಕ ಪರಿಶೋಧನೆ, ತಪಾಸಣೆ ಕಾರ್ಯಕ್ರಮ ನಡೆಯಿತು. ನೋಡಲ್ ಅಧಿಕಾರಿ ಬಾಲಕೃಷ್ಣ ರೈ, ಗ್ರಾ.ಪಂ. ಉಪಾಧ್ಯಕ್ಷೆ ಪದ್ಮ, ಸದಸ್ಯರುಗಳಾದ ವೆಂಕಟೇಶ, ಶಿವ ನಂಜಪ್ಪ, ಸರೋಜಮ್ಮ, ಕಾರ್ಯದರ್ಶಿ ರಂಜಿನಿ ಹಾಜರಿದ್ದರು.