ಸೋಮವಾರಪೇಟೆ, ಫೆ. 28: ಸಮೀಪದ ತಣ್ಣೀರುಹಳ್ಳ ಗ್ರಾಮದ ಗಿಲ್ಲಿ ಬ್ರದರ್ಸ್ ತಂಡದ ವತಿಯಿಂದ ಮಾ. 4 ರಂದು ಅಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾಟ ಆಯೋಜಿಸಲಾಗಿದೆ ಎಂದು ಸಂಘಟಕರಾದ ಕುಮಾರ್ ತಿಳಿಸಿದ್ದಾರೆ. ಪಂದ್ಯಾಟದಲ್ಲಿ ವಿಜೇತರಾಗುವ ತಂಡಗಳಿಗೆ ಕ್ರಮವಾಗಿ ರೂ. 20, 10 ಮತ್ತು 5 ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವದು. ಇದರೊಂದಿಗೆ ವೈಯುಕ್ತಿ ವಿಭಾಗದಲ್ಲೂ ಪ್ರಶಸ್ತಿ ನೀಡಲಾಗುವದು. ಹೆಚ್ಚಿನ ಮಾಹಿತಿಗೆ ಮೊ: 9008856196, 7760262373 ಸಂಖ್ಯೆಗಳನ್ನು ಸಂಪರ್ಕಿಸಬಹುದು.