ಮಡಿಕೇರಿ, ಫೆ. 28: ಬೆಂಗೂರು ಗ್ರಾ.ಪಂ. ವ್ಯಾಪ್ತಿಯ ಕೊಳಗದಾಳು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಸ್ತೆ ಅಭಿವೃದ್ಧಿ ಮತ್ತು ನೆಲಹಾಸು ಅಳವಡಿಕೆ ಕಾಮಗಾರಿಗೆ ಈ ಹಿಂದೆ ರೂ. 7 ಲಕ್ಷ ಅನುದಾನ ಬಿಡುಗಡೆಗೆ ಕಾರಣಕರ್ತರಾಗಿದ್ದ ಈ ಹಿಂದಿನ ಉಸ್ತುವಾರಿ ಸಚಿವರಾಗಿದ್ದ ಸೀತಾರಾಮ್ ಅವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಅವರನ್ನು ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಗ್ರಾಮಸ್ಥರು ಸನ್ಮಾನಿಸಿದರು.
ಈ ಸಂದರ್ಭ ಕಾಂಗ್ರೆಸ್ ಪಕ್ಷದ ಚೇರಂಬಾಣೆ ವಲಯ ಕಾರ್ಯದರ್ಶಿ ಕೆ.ಎಂ. ಬಶೀರ್ ಸೇರಿದಂತೆ ಪ್ರಮುಖರು ಹಾಜರಿದ್ದರು. ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಮುಕ್ಕಾಟಿರ ರಮೇಶ್ ಅವರು ಹರೀಶ್ ಅವರನ್ನು ಸನ್ಮಾನಿಸಿದರು. ಕಾರ್ಯದರ್ಶಿ ಕರುಣಾಕರ್ ಸ್ವಾಗತಿಸಿ, ಮುಕ್ಕಾಟಿ ಸುಕುಮಾರ್ ವಂದಿಸಿದರು.