ಮಡಿಕೇರಿ, ಫೆ. 28: ಮಡಿಕೇರಿ ನಗರಸಭೆಯ ಆಯುಕ್ತರು ಜನಪರ ಕಾಳಜಿಯೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಕೆಲವರು ವಿನಾಕಾರಣ ಆಯುಕ್ತರ ವರ್ಗಾವಣೆಗಾಗಿ ಒತ್ತಾಯಿಸುತ್ತಿ ರುವದು ಖಂಡನೀಯವೆಂದು ನಗರಸಭೆಯ ಮಾಜಿ ಅಧ್ಯಕ್ಷೆ ಶ್ರೀಮತಿ ಬಂಗೇರ (ಮೊದಲ ಪುಟದಿಂದ) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ನಗರಸಭೆಯ ಆಡಳಿತ ಮಂಡಳಿಯ ಅಧಿಕಾರವಧಿ ಮುಕ್ತಾಯದ ಹಂತದಲ್ಲಿರುವ ಸಂದರ್ಭ ಆಯುಕ್ತರನ್ನು ವರ್ಗಾಯಿಸಲು ಆಗ್ರಹಿಸುತ್ತಿರುವದು ಸಮಂಜಸವಲ್ಲವೆಂದು ತಿಳಿಸಿದ್ದಾರೆ.ಕಳೆದ ಐದು ವರ್ಷಗಳಲ್ಲಿ ಅನೇಕ ಮಂದಿ ಆಯುಕ್ತರು ಬಂದು ಹೋಗಿದ್ದಾರೆ. ಪ್ರಸ್ತುತ ಇರುವ ಆಯುಕ್ತರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.