ಮಡಿಕೇರಿ, ಮಾ. 1: ಕೆಲವು ದಿನಗಳ ಹಿಂದೆ ಪ್ರಕೃತಿ ವಿಕೋಪದಲ್ಲಿ ಫಸಲು ಕಳೆದುಕೊಂಡ ಕೊಡಗಿನ ರೈತರಿಗೆ ಕೇಂದ್ರ ಸರ್ಕಾರದ ಪರಿಹಾರ ಹಣ ಎಲ್ಲಾ ರೈತರ ಖಾತೆಗಳಿಗೆ ಜಮಾವಣೆಗೊಳ್ಳುತ್ತಿದ್ದು, ಇದೀಗ ಬಹುತೇಕ ಖಾತೆಗಳಿಂದ ಬಹುಪಾಲು ಹಣವನ್ನು ರೈತರ ಗಮನಕ್ಕೆ ಬಾರದೆ ವಾಪಾಸ್ ಪಡೆಯುತ್ತಿರುವ ಬಗ್ಗೆ ಬಿ.ಜೆ.ಪಿ. ಪಕ್ಷದ ವತಿಯಿಂದ ವಿಚಾರಣೆ ನಡೆಸಿ ಕೇಂದ್ರ ಸರ್ಕಾರದಿಂದ ಬಂದ ಪರಿಹಾರ ಹಣವು ರಾಜ್ಯ ಸರ್ಕಾರದ ಮೂಲಕ ವಿತರಣೆ ಆಗಿದ್ದು ದಿಢೀರ್ ವಾಪಾಸಾತಿ ಪ್ರಕರಣದ ಬಗ್ಗೆ ಬಿ.ಜೆ.ಪಿ. ಪಕ್ಷದಿಂದ ವಾಪಾಸಾತಿಗೆ ಗಡುವು ನೀಡಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಶಾಸಕರ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸಲು ನಿಶ್ಚಯಿಸಲಾಗಿತ್ತು. ಆದರೆ ನಿನ್ನೆ ಮುಖ್ಯಮಂತ್ರಿಗಳನ್ನು ಭೇಟಿಯಾದಾಗ ಇದನ್ನು ಸಂಪೂರ್ಣ ಸರಿಪಡಿಸುವ ಭರವಸೆ ನೀಡಿದಲ್ಲದೆ ತಮ್ಮ ಭಾಷಣದಲ್ಲಿಯೂ ಇದನ್ನು ಉಲ್ಲೇಖ ಮಾಡಿದ್ದಾರೆ.

ಆ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ವಾಪಸ್ ಪಡೆದಿರುವದಾಗಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಎ.ಕೆ. ಮನು ಮುತ್ತಪ್ಪ ತಿಳಿಸಿದ್ದಾರೆ.