ಮಡಿಕೇರಿ, ಫೆ. 28: ಪಾಕ್ ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ ನಿರತರಾಗಿದ್ದ ವೇಳೆ, ಯುದ್ಧ ವಿಮಾನ ಪತನದೊಂದಿಗೆ ವಿದ್ರೋಹಿಗಳ ವಶಕ್ಕೆ ಸಿಲುಕಿರುವ ಭಾರತ ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಸುರಕ್ಷಿತ ಬಿಡುಗಡೆಗಾಗಿ ಇಂದು ಇಲ್ಲಿನ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಸಂಘ ಪರಿವಾರದ ಪ್ರಮುಖರಾದ ಚಂದ್ರ ಉಡೋತ್, ಗಣೇಶ್ ಕಡಗದಾಳು, ಮಹೇಶ್ ಸೇರಿದಂತೆ ಇತರ ಕಾರ್ಯಕರ್ತರು ಪಾಲ್ಗೊಂಡಿದ್ದರು.