ಮಡಿಕೇರಿ, ಫೆ. 28: ಹುತಾತ್ಮರಾದ ವೀರಯೋಧರಿಗೆ ಮತ್ತು ಇತ್ತೀಚೆಗೆ ಸ್ವರ್ಗಸ್ಥರಾದ ಹಿರಿಯ ಸಾಹಿತಿ, ವಿಜಯಪುರದಲ್ಲಿ ನಡೆದ 79ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕೊ. ಚೆನ್ನಬಸಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಿಂದ ಶ್ರದ್ಧಾಂಜಲಿ ಸಭೆ ನಡೆಯಿತು.

ಮೃತರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು. ಬಳಗದ ನಿರ್ದೇಶಕರಾದ ಬಿ.ಎ. ಶಂಷುದ್ದೀನ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ ಮಾತನಾಡಿದರು.

ಸಭೆಯಲ್ಲಿ ಕೊಡಗು ಜಿಲಾ ್ಲಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಟಿ.ಪಿ. ರಮೇಶ್, ಬಳಗದ ಉಪಾಧ್ಯಕ್ಷ ಎಂ.ಈ. ಮೊಹಿದ್ದೀನ್, ಕಾರ್ಯದರ್ಶಿ ಪಿ.ಕೆ. ಲತೀಫ್, ಸದಸ್ಯರಾದ ಮುನೀರ್‍ಅಹ್ಮದ್, ಸುನೀತಾ ಪ್ರೀತು, ಲೋಕನಾಥ ಅಮೆಚೂರ್, ಅಂಬೆಕಲ್ ನವೀನ್ ಉಪಸ್ಥಿತರಿದ್ದರು.