ಗುಡ್ಡೆಹೊಸೂರು, ಫೆ. 28 : ಕಂಬಿಬಾಣೆ ಗ್ರಾಮದ ಮಾಗ್‍ಡೊರ್ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಶಿವರಾತ್ರಿ ಮಹೋತ್ಸವ ತಾ. 26 ರಿಂದ ಪ್ರಾರಂಭವಾಗಿ ಮಾರ್ಚ್ 4 ರಂದು ಮುಕ್ತಾಯಗೊಳ್ಳಲಿದೆ. ತಾ. 26 ರಂದು ಸಂಜೆ 8.30 ಗಂಟೆಗೆ ಧ್ವಜಾರೋಹಣ ನಡೆಯಿತು. ಕ್ಷೇತ್ರದ ತಂತ್ರಿ ಶಿವಗಿರಿ ಮಠದ ಸನಲ್ ತಂತ್ರಿಗಳು ಹಾಗೂ ಮುಖ್ಯ ಅರ್ಚಕ ಪೆರುಂಬಳಂ ವಿನೀಶ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

7 ದಿನಗಳ ಕಾಲ ವಿಶೇಷ ಪೂಜಾ ಕಾರ್ಯ ನಡೆದು ಮಾ. 4 ರಂದು ರಾತ್ರಿ ದೀಪಾರಾಧನೆ, ಮೆರವಣಿಗೆ ನಡೆಯಲಿದೆ. ಅಲ್ಲದೆ ಜಾಗರಣೆ ಪ್ರಯುಕ್ತ ವಿವಿಧ ಮನರಂಜನೆ ಕಾರ್ಯಕ್ರಮ ನಡೆಯಲಿದೆ.

ಕಡಗದಾಳು: ಕಡಗದಾಳು ಗ್ರಾಮದಲ್ಲಿರುವ ಪ್ರಕೃತಿದತ್ತ ಶ್ರೀ ಬೊಟ್ಲಪ್ಪೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿಯ ವಾರ್ಷಿಕ ಮಹಾ ಪೂಜೆಯು ತಾ. 4 ಮತ್ತು 5ರಂದು ನಡೆಯಲಿದೆ. ಅಂದು ರಾತ್ರಿ ಜಾಗರಣೆ ಹಾಗೂ ಬಿಲ್ವಪತ್ರೆ ಅರ್ಚನೆ, ಎಳನೀರು ಅಭಿಷೇಕ ಸೇರಿದಂತೆ ಹಲವು ಪೂಜೆ ಕೈಂಕರ್ಯ ನಡೆಯಲಿವೆ. ತಾ. 5 ರಂದು ಬೆಳಿಗ್ಗೆ 10 ಗಂಟೆಯಿಂದ ವಿವಿಧ ಪೂಜಾ ಕೈಂಕರ್ಯಗಳು ಆರಂಭಗೊಂಡು ಮಧ್ಯಾಹ್ನ ಮಹಾ ಪೂಜೆ, ಮಹಾ ಮಂಗಳಾರತಿ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.