ಚೆಟ್ಟಳ್ಳಿ, ಫೆ. 28: ಸಿದ್ದಾಪುರ ಸಮೀಪದ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಂಡಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾವತಿ ಅವರ ಅನುದಾನದಲ್ಲಿ ಡಾಂಬರೀಕರಣಗೊಂಡಿರುವ ಹುಂಡಿ ಜುಮಾ ಮಸೀದಿಯ ರಸ್ತೆಯನ್ನು ಮಸೀದಿಯ ಖತೀಬ್ ನೌಷಾದ್ ಜುವರಿ ಉದ್ಘಾಟಿಸಿದರು

ಈ ಸಂದರ್ಭ ಹುಂಡಿ ಜುಮಾ ಮಸೀದಿ ಸಮಿತಿಯ ಅಧ್ಯಕ್ಷ ಸಿ. ಮಹಮ್ಮದ್, ಗ್ರಾಮದ ಪ್ರಮುಖರಾದ ಯೂಸುಫ್, ಉಮ್ಮರ್, ಟಿ.ಪಿ. ಅಬೂಬಕ್ಕರ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಯೋಗೇಶ್, ಯುವ ಕಾಂಗ್ರೆಸ್‍ನ ಶಮೀರ್, ಜಲೀಲ್, ಹುಸೇನ್ ಹಾಗೂ ಗ್ರಾಮಸ್ಥರು ಹಾಜರಿದ್ದರು.