ಮಡಿಕೇರಿ, ಫೆ. 28: ಮೈಸೂರಿನ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ರಣಜೀತ್ ಟಾಕೀಸ್ ಬಳಿ ಇತ್ತೀಚೆಗೆ ಅಪರಿಚಿತ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ. ಈ ವ್ಯಕ್ತಿ ಕೊಡಗಿನ ವ್ಯಕ್ತಿಯಾಗಿರುವ ಸಾಧ್ಯತೆ ಇದೆ ಎಂಬ ಶಂಕೆಯೂ ಪೊಲೀಸ್ ಮೂಲಗಳಿಂದ ಹೇಳಲಾಗುತ್ತಿದ್ದು, ವಾರಸುದಾರರಿದ್ದಲ್ಲಿ ಸಂಪರ್ಕಿಸುವಂತೆ ಇಲಾಖಾ ಪ್ರಕಟಣೆ ಕೋರಿದೆ. ಸುಮಾರು 55 ರಿಂದ 60 ವರ್ಷ ಪ್ರಾಯದ ವ್ಯಕ್ತಿಯ ಮೃತದೇಹ ಇದಾಗಿದ್ದು, ಕಾಲ ಮಂಡಿಯ ಬಳಿ ಹಳೆ ಗಾಯದ ಗುರುತು ಇದೆ ಎಂಬ ಮಾಹಿತಿ ನೀಡಿರುವ ಪೊಲೀಸರು ಲಷ್ಕರ್ ಠಾಣೆ 2418107, 9480802232 ಅಥವಾ ಕಂಟ್ರೋಲ್ ರೂಂ 2418339 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ.