ಕೂಡಿಗೆ, ಫೆ. 28: ತೊರೆನೂರು ಶ್ರೀ ಶನೇಶ್ಚರ ಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿ ವತಿಯಿಂದ ಮಹಾಶಿವರಾತ್ರಿ ಹಬ್ಬದ ಅಂಗವಾಗಿ, ದೇವಾಲಯದ ಆವರಣದಲ್ಲಿ ಜಾನಪದ, ಗೀತಗಾಯನ ಸಾಂಸ್ಕೃತಿಕ ಕಾರ್ಯಕ್ರಮ ಮಾ. 4 ರಂದು ನಡೆಯಲ್ಲಿದೆ. ಮಹಾಶಿವರಾತ್ರಿಹಬ್ಬದ ಅಂಗವಾಗಿ ಸ್ವಾಮಿಗೆ ವಿಶೇಷಗಣಪತಿ ನವಗ್ರಹ ಪೂಜೆ, ಸತ್ಯನಾರಾಯಣ ಪೂಜೆ ನಡೆಯಲ್ಲಿದೆ.
ಸಂಜೆ 7 ಗಂಟೆಗೆ ಶ್ರೀ ಶಿವಕುಮಾರಸ್ವಾಮೀಜಿಯವರಿಗೆ ನುಡಿ ನಮನ ಕಾರ್ಯಕ್ರಮ ನಂತರ ಬಿ.ಎಸ್. ಲೋಕೇಶ್ ಸಾಗರ್, ಟಿ. ಆರ್. ಪ್ರಭುದೇವ್ ಸಾರಥ್ಯದಲ್ಲಿ ಹಾಸ್ಯ ಮತ್ತು ಜಾದು ಪ್ರದರ್ಶನ, ಹಾಗೂ ಜಾನಪದ ಜಾತ್ರೆ ಹಾಗೂ ಗೀತಗಾಯನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲ್ಲಿವೆ. ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎಸ್. ಕೃಷ್ಣ ಗೌಡ ತಿಳಿಸಿದ್ದಾರೆ. ವಿರಕ್ತ ಮಠದ ಮಲ್ಲೇಶಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಉದ್ಘಾಟನೆಯನ್ನು ಮೈಸೂರಿನ ಮಾಜಿ ಶಾಸಕ ವಾಸು ನೆರವೇರಿಸಲಿದ್ದಾರೆ. ನುಡಿ ನಮನವನ್ನು ಮೈಸೂರಿನ ಹಿರಿಯ ಸಾಹಿತಿ ಡಾ. ಮೋಹನ್ ಪಾಳೇಗಾರ, ನಡೆಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ಯಾಗತ್ತ್ತೂರು ಟಿ.ಎ. ಮಾದಪ್ಪ ವಹಿಸಲಿದ್ದಾರೆ.