ವೀರಾಜಪೇಟೆ, ಫೆ. 27: ಸಂಕುಚಿತ ಮನೋಭಾವನೆಯನ್ನು ಬಿಟ್ಟು ನಾವು ಮಾಡುವ ವೃತ್ತಿಯನ್ನು ಸಮಾಜ ಗೌರವದಿಂದ ಕಾಣಬೇಕು ಎಂದು ವೀರಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ ಶ್ರೀಧರ್ ಹೇಳಿದರು.

ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತದಿಂದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸವಿತಾ ಮಹರ್ಷಿ ಜನ್ಮ ದಿನಾಚರಣೆಯಲ್ಲಿ ಮಾತನಾಡಿ ಸರ್ಕಾರ ಸವಿತಾ ಸಮಾಜವನ್ನು ಎಲ್ಲೂ ನಿರ್ಲಕ್ಷ್ಯ ಮನೋಭಾವನೆ ಯಿಂದ ನೋಡಿಲ್ಲ.

ಜನಾಂಗವನ್ನು ಕ್ರೋಡೀಕರಣ ಮಾಡುವ ಸಲುವಾಗಿ ಸವಿತಾ ಮಹರ್ಷಿ ಜಯಂತಿಯನ್ನು ಆಚರಿಸುತ್ತಿದೆ ಎಂದು ಹೇಳಿದರು.

ಮಡಿಕೇರಿಯ ಸರಸ್ವತಿ ಡಿಎಡ್ ಕಾಲೇಜಿನ ಉಪನ್ಯಾಸಕ ಕುಮಾರ್ ಮಾತನಾಡಿ ಸವಿತಾ ಎಂಬ ಹೆಸರಿನ ಬಗ್ಗೆ ಎಲ್ಲರಿಗೂ ಒಂದು ಕುತೂಹಲ ಇದೆ. ಗಾಯತ್ರಿ ಮಂತ್ರವನ್ನು ಪಠನೆ ಮಾಡುವ ಮೂಲಕ ಸವಿತಾ ಮಹರ್ಷಿಯನ್ನು ಕಾಣಬಹುದು ಎಂದರು.

ಸವಿತಾ ಸಮಾಜದ ಮ್ಯೆಸೂರು ಜಿಲ್ಲಾಧ್ಯಕ್ಷ ಎನ್.ಆರ್ ನಾಗೇಶ್ ಮಾತನಾಡಿ ಸರ್ಕಾರ ಮಾಡುವ ಕಾರ್ಯಕ್ರಮಗಳಿಗೆ ಶಾಸಕರು ಸಂಸದರು ಗೈರು ಹಾಜರಾದರೆ ವೃತ್ತಿ ಸಂಘಟನೆಯ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳುವದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಜಿಲ್ಲಾದ್ಯಕ್ಷ ಹೆಚ್,ಎನ್ ವೆಂಕಟೇಶ್, ಎಂ.ಡಿ ಶಿವಕುಮಾರ್, ನರಸಿಂಹ, ವೀರಾಜಪೇಟೆ ನಗರ ಅಧ್ಯಕ್ಷ ದೇವರಾಜ್, ಶಿರಸ್ತೇದಾರ್ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.