ಮಡಿಕೇರಿ, ಫೆ. 27: ಇಲ್ಲಿನ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ರೇಂಜರ್ಸ್ ಘಟಕದ ವತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ಕೌಟ್ಸ್ ನ್ಯಾಷನಲ್ ಟ್ರೈನರ್ ಜಿಮ್ಮಿ ಸಿಕ್ವೇರಾ ಸಂಸ್ಥೆ ಉಗಮದ ಬಗ್ಗೆ ಮಾಹಿತಿ ನೀಡಿದರು. ಸ್ಕೌಟ್ಸ್ ಮತ್ತು ಗೈಡ್ಸ್ಗಳಿಗೆ ಪರೀಕ್ಷೆಗಳ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ನಿರ್ಮಲ ವಹಿಸಿದ್ದರು. ರೇಂಜರ್ಸ್ ಘಟಕದ ಸಂಚಾಲಕಿ ನಮಿತಾ ಉಪಸ್ಥಿತರಿದ್ದರು. ಶಾಲಿನಿ ಸ್ವಾಗತಿಸಿ, ಅಂಕಿತ ನಿರೂಪಿಸಿ, ನಜುಮುನ್ನಿಸಾ ವಂದಿಸಿದರು.