ಮಡಿಕೇರಿ, ಫೆ. 27: ಕಡಗದಾಳು ಗ್ರಾ.ಪಂ. ವ್ಯಾಪ್ತಿಯ ಇಬ್ನಿವಳವಾಡಿ ಗ್ರಾಮದ ಚೆಟ್ಟಳ್ಳಿ ರಸ್ತೆಯಲ್ಲಿರುವ ನೀರುಕೊಲ್ಲಿಯ ಇರ್ಕಂಡ ಮನೆಯಿಂದ ಮಾಲೇರ ಕುಟುಂಬಸ್ಥರ ಮನೆವರೆಗೆ ಸಾಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ನಡೆದಾಡಲು ಕೂಡ ಅಸಾಧ್ಯವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ರಸ್ತೆ ಅಭಿವೃದ್ಧಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ರೂ. 4 ಲಕ್ಷ ಬಿಡುಗಡೆಗೊಂಡಿದ್ದರೂ, ಸಂಬಂಧಿಸಿದ ಗ್ರಾ.ಪಂ. ಆಡಳಿತ ಇನ್ನೂ ಕೂಡ ಕಾಮಗಾರಿ ಆರಂಭಿಸಿಲ್ಲ. ನೂರಾರು ಮಂದಿ ಓಡಾಡುವ ರಸ್ತೆ ಹದಗೆಟ್ಟು ವಿದ್ಯಾರ್ಥಿಗಳು, ದ್ವಿಚಕ್ರ ವಾಹನ ಸವಾರರು ತೆರಳದಂತಾಗಿದೆ. ಕೂಡಲೇ ರಸ್ತೆ ಕಾಮಗಾರಿ ಆರಂಭಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.