ಸೋಮವಾರಪೇಟೆ, ಫೆ. 27: ಇಲ್ಲಿನ ಜೂನಿಯರ್ ಕಾಲೇಜು ಸಮೀಪವಿರುವ ಬಿ.ಎ. ಅರುಣ್ ಕುಮಾರ್ ಅವರ ಪೆಟ್ಟಿಗೆ ಅಂಗಡಿಗೆ ರಾತ್ರಿ ಕಳ್ಳರು ನುಗ್ಗಿ 8 ಸಾವಿರ ನಗದನ್ನು ಕಳವು ಮಾಡಿರುವ ಘಟನೆ ನಡೆದಿದೆ.

ರಾತ್ರಿ ವೇಳೆ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು, ಅಂಗಡಿಯ ಒಳಗೆ ಇಟ್ಟಿದ್ದ 8 ಸಾವಿರ ಹಣವನ್ನು ಕಳ್ಳತನ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.