ಸುಂಟಿಕೊಪ್ಪ, ಫೆ. 27: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯಲ್ಲಿ ಮಗುಚಿಕೊಂಡ ಘಟನೆ ಮಾದಾಪುರ ರಸ್ತೆಯಲ್ಲಿರುವ ಸ್ವಸ್ಥ ಶಾಲೆಯ ಸಮೀಪ ಮಂಗಳವಾರ ರಾತ್ರಿ ಸಂಭವಿಸಿದೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಲ್ಲಿನ ಅಂಬೇಡ್ಕರ್ ಬಡಾವಣೆಯ ಪ್ರಜ್ವಲ್, ಶ್ಯಾಮ್ ಮತ್ತು ಸಂದೀಪ್ ಎಂಬವರು ಅವಘಡದಿಂದ ಗಾಯಗೊಂಡಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಗಾಯಾಳುಗಳು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.