ಸುಂಟಿಕೊಪ್ಪ, ಫೆ. 26: ಸ್ಕೌಟ್ಸ್ ಮತು ಗೈಡ್ಸ್‍ನ ಸಂಸ್ಥಾಪನಾ ನೆನಪಿಗಾಗಿ ಸಂತ ಅಂತೋಣಿ ಶಾಲೆಯಲ್ಲಿ ಚಿಂತನ ದಿನವನ್ನು ಆಚರಿಸಲಾಯಿತು. ಸ್ಕೌಟ್ಸ್ ಅಂಡ್ ಗೈಡ್ಸ್‍ನ ನಾಯಕಿ ವಿದ್ಯಾರ್ಥಿಗಳು ಮೊದಲಿಗೆ ಧ್ವಜಾರೋಹಣ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್‍ನ ಅಧ್ಯಕ್ಷ ಗಣೇಶ್ ಮಾತನಾಡಿ, ವಿದ್ಯಾರ್ಥಿಗಳು ದೇಶ ಪ್ರೇಮ, ದೇಶ ಸೇವೆಯನ್ನು ಮೈಗೂಡಿಸಿಕೊಂಡು ಸತ್ಪ್ರಜೆಗಳಾಗಿ ಮುಂದೆ ಬರಬೇಕೆಂದರು. ಮುಖ್ಯ ಶಿಕ್ಷಕಿ ವೀರಾ ಮಾತನಾಡಿ, ಬೇಡನ್ ಪೌವೆಲ್ ಹಾಗೂ ಲೇಡಿ ಪೌವೆಲ್ ಅವರು ಒಳ್ಳೆಯ ಆದರ್ಶಗಳನ್ನು ಇಟ್ಟುಕೊಂಡು ಸಂಸ್ಥೆಯನ್ನು ಮಾಡಿದ್ದು, ದೇಶಾಭಿಮಾನ ಮೈಗೂಡಿಸಿಕೊಂಡು ಸ್ಕೌಟ್ಸ್ ಗೈಡ್ಸ್‍ನ ದೆÉ್ಯೀಯೋದ್ಧೇಶವನ್ನು ಕರಗತ ಮಾಡಿಕೊಂಡು ಸದೃಢ ಭಾರತ ನಿರ್ಮಿಸುವಲ್ಲಿ ಮುಂದಾಗಬೇಕೆಂದರು.

ಲಯನ್ ಕಾರ್ಯದರ್ಶಿ ಗ್ಲೇನ್ ಮೆನೆಜೆಸ್ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಈ ಸಂದರ್ಭ ಲಯನ್ಸ್ ಮಾಜಿ ಅಧ್ಯಕ್ಷರುಗಳಾದ ಕೆ.ಪಿ. ಜಗನ್ನಾಥ್, ಎಂ.ಕೆ. ಪೆಮ್ಮಯ್ಯ, ನಿಖೇಶ್, ಸಿಸ್ಟರ್ ವೈಲೆಟ್, ಶಿಕ್ಷಕಿಯಾರಾದ ಪ್ರೀತಿ ಜಾಯ್ಸ್, ಯಿವಾ ಬೆನ್ಸಿಸ್, ಶಿಕ್ಷಕ ಮಹೇಶ್ ಹಾಗೂ ಶಿಕ್ಷಕಿಯರು ಇದ್ದರು. ವಿದ್ಯಾರ್ಥಿಗಳು ಕಾರ್ಯ ಚಟುವಟಿಕೆಗಳನ್ನು ಪ್ರದರ್ಶಿಸಿದರು.