ವೀರಾಜಪೇಟೆ, ಫೆ. 26: ಅರಮೇರಿ ಕಳಂಚೇರಿ ಮಠದ ‘ದಿಶಾ ಎಕ್ಷ್ ಪೆರಿಯನ್ಸಲ್ ಲರ್ನಿಂಗ್’ ಸಂಸ್ಥೆಯ ವತಿಯಿಂದ ಎಸ್.ಎಂ.ಎಸ್. ಶಾಲಾ ಆವರಣದಲ್ಲಿ ಜಿಲ್ಲೆಯ ವಿವಿಧ ಪ್ರೌಢಶಾಲೆಗಳ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಹತ್ತನೆಯ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲು ಉತ್ತೇಜನ ಹಾಗೂ ಮಾರ್ಗದರ್ಶನ ನೀಡಲಾಯಿತು.

ವಿದ್ಯಾರ್ಥಿಗಳು ತಮ್ಮನ್ನು ತಾವು ಅರಿತುಕೊಳ್ಳಲು ಸಹಾಯಕವಾಗುವ ಹಲವಾರು ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಸದಸ್ಯರಾದ ಎನ್.ಜಿ. ಪ್ರೀತಮ್ ಪೊನ್ನಪ್ಪ, ಕೆ.ಪಿ. ಕುಸುಮ ಅವರುಗಳು ರೂಪಿಸಿದ ಈ ಕಾರ್ಯಾಗಾರದಲ್ಲಿ ಮೂರ್ನಾಡಿನ ಮಾರುತಿ ಎಜುಕೇಷನ್ ಸೊಸೈಟಿ, ಜ್ಞಾನ ಜ್ಯೋತಿ ಎಜುಕೇಷನ್ ಸೊಸೈಟಿ, ವೀರಾಜಪೇಟೆಯ ರೋಟರಿ ಶಾಲೆ, ತ್ರಿವೇಣಿ ಶಾಲೆ, ಕೂರ್ಗ್ ವ್ಯಾಲಿ ಶಾಲೆ, ಮಡಿಕೇರಿಯ ಎ.ಎಲ್.ಜಿ. ಕ್ರೆಸೆಂಟ್ ಶಾಲೆ ಹಾಗೂ ಅರಮೇರಿಯ ಎಸ್‍ಎಂಎಸ್ ಅಕಾಡೆಮಿ ಆಫ್ ಸೆಂಟ್ರಲ್ ಎಜುಕೇಷನ್ ವಿದ್ಯಾರ್ಥಿಗಳು ‘ಪಾಲ್ಗೊಂಡಿದ್ದರು.