ಮಡಿಕೇರಿ, ಫೆ. 26: ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯಲ್ಲಿ ಒಂದಾದ ಕೈಗಾರಿಕಾ ಪ್ರವಾಸವನ್ನು ಮಂಗಳೂರಿನ ವಿವಿಧ ಕೈಗಾರಿಕಾ ಘಟಕಗಳಿಗೆ ಭೇಟಿ ಕೊಡುವ ಮೂಲಕ ಕೈಗೊಂಡರು.

ಮಂಗಳೂರಿನ ಪ್ರತಿಷ್ಠಿತ ಕಂಪೆನಿಗಳಲ್ಲಿ ಒಂದಾದ ಅಚಲ್ ಮತ್ತು ಡೆಕ್ಕನ್ ಪ್ಲಾಸ್ಟ್ ಕೈಗಾರಿಕಾ ಕಂಪೆನಿಗಳಿಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಗೋಡಂಬಿ ಕಾರ್ಖಾನೆಯಲ್ಲಿ ವಿದೇಶಗಳಿಗೆ ಕಳುಹಿಸಿಕೊಡುವ ಸಿದ್ಧ ಗೋಡಂಬಿಯ ತಯಾರಿಕೆಯ ಏಳು ಹಂತಗಳನ್ನು ತಿಳಿದುಕೊಂಡರು.

ಶಿಕ್ಷಣದ ಜೊತೆ ಜೊತೆಗೆ ಇಂತಹ ಉಲ್ಲಾಸದಾಯಕ ಕೈಗಾರಿಕಾ ಪ್ರವಾಸವು ವಿದ್ಯಾರ್ಥಿಗಳಿಗೆ ಹೊಸ ಅನುಭವವನ್ನು ತಂದುಕೊಟ್ಟಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.