ನಾಪೆÉÇೀಕ್ಲು, ಫೆ. 26 : ಸಮಾಜ ಎಂಬದು ಒಗ್ಗಟ್ಟಿನ ಸಂಕೇತ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಮಾಜಿ ವಿಧಾನ ಸಭಾ ಅಧ್ಯಕ್ಷ ಕೆ.ಜಿ. ಬೋಪಯ್ಯ ಅಭಿಪ್ರಾಯ ಪಟ್ಟರು.

ನಾಪೆÉÇೀಕ್ಲು ಕೊಡವ ಸಮಾಜದಲ್ಲಿ ಕೊಡಗಿನ ಮಹಾಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯವರ 150 ನೇ ಜನ್ಮದಿನದ ನೆನಪಿನಲ್ಲಿ ನಿರ್ಮಿಸಲಾದ ಅಪ್ಪಚ್ಚ ಕವಿ ಸಭಾಂಗಣವನ್ನು ಉದ್ಘಾಟಿಸಿ ಅವರು. ಮಾತನಾಡಿದರು. ನಾಪೋಕ್ಲು ಕೊಡವ ಸಮಾಜಕ್ಕೆ ಹೋಗಲು ಗುಂಡಿಗಳಿಂದ ವಾಹನ ಗಳು ಹರಸಾಹಸ ಪಡುತ್ತಿದ್ದುದನ್ನು ಮನಗಂಡು ಸುಮಾರು 60 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯತ್ ಸದಸ್ಯ ಪಾಡಿಯಮ್ಮಂಡ ಮುರುಳಿ ಕರುಂಬಮಯ್ಯ, ಕೊಡವ ಸಮಾಜದ ಸ್ಥಾಪಕ ಅಧ್ಯಕ್ಷ ಮಣವಟ್ಟೀರ ಬಿ. ಮಾಚಯ್ಯ, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡವ ಸಮಾಜದ ಅಧ್ಯಕ್ಷರಾದ ಬಿದ್ದಾಟಂಡ ರಮೇಶ್ ಚಂಗಪ್ಪ ವಹಿಸಿದ್ದರು. ಕೊಡವ ಸಮಾಜ ರಿಕ್ರಿಯೇಷನ್ ಕ್ಲಬ್‍ನ ಕಾಂಡಂಡ ಜೋಯಪ್ಪ ಪಾಲ್ಗೊಂಡಿದ್ದರು. ನಿವೃತ್ತ ಶಿಕ್ಷಕ ಕುಲ್ಲೇಟಿರ ಮುತ್ತಪ್ಪ ತಮ್ಮ ಧರ್ಮಪತ್ನಿ ಹೆಸರಿನಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರೂ.50,000 ಗಳನ್ನು ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ಅವರಿಗೆ ಹÀಸ್ತಾಂತರಿಸಿದರು.

ವೇದಿಕೆಯಲ್ಲಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮೂವೇರ ರೇಖಾ ಪ್ರಕಾಶ್ ಮತ್ತು ಕೊಡವ ಸಮಾಜದ ಸದಸ್ಯರು ಇದ್ದರು. ಕೊಟೇರ ನೈಲಾ ಚಂಗಪ್ಪ ಪ್ರಾರ್ಥಿಸಿದರು, ಉಪಾಧ್ಯಕ್ಷ ಮಾಳೇಯಂಡ ಅಯ್ಯಪ್ಪ ಸ್ವಾಗತಿಸಿ ವ್ಯವಸ್ಥಾಪಕರಾದ ಶಿವಚಾಳಿಯಂಡ ಜಗದೀಶ್ ನಿರೂಪಿಸಿದರು. ಕಾರ್ಯದರ್ಶಿ ಮಂಡೀರ ರಾಜಪ್ಪ ಚಂಗಪ್ಪ ವಂದಿಸಿದರು. - ದುಗ್ಗಳ