ಮಡಿಕೇರಿ, ಫೆ. 26: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ಜಿಲ್ಲೆಯ ಪತ್ರಕರ್ತ ವಿಘ್ನೇಶ್ ಭೂತನಕಾಡು ಹಾಗೂ ಕೆ.ವಿ. ಪರಮೇಶ್ ಅವರಿಗೂ ಪ್ರಶಸ್ತಿ ಲಭ್ಯವಾಗಿದೆ.

‘ಕನ್ನಡ ಪ್ರಭ’ ದಿನಪತ್ರಿಕೆಯ ಜಿಲ್ಲಾ ವರದಿಗಾರರಾಗಿರುವ ವಿಘ್ನೇಶ್ ಭೂತನಕಾಡು ಅವರಿಗೆ 2017ನೇ ಸಾಲಿನ ವನ್ಯ ಪ್ರಾಣಿಗಳ ಕುರಿತ ಅತ್ಯುತ್ತಮ ಲೇಖನಕ್ಕೆ ಸಂಘವು ಕೊಡಮಾಡುವ ಆರ್.ಎಲ್. ವಾಸುದೇವರಾವ್ ಪ್ರಶಸ್ತಿ ಲಭಿಸಿದೆ. ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ‘ಹಲಸಿನ ಹಣ್ಣು ತಿನ್ನಲು ಕಾಫಿ ತೋಟಕ್ಕೆ ಕಾಡಾನೆಗಳ ದಂಡು’ ಎಂಬ ವರದಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಇವರೊಂದಿಗೆ ಬೆಂಗಳೂರಿನ ಸಂಯುಕ್ತ ಕರ್ನಾಟಕದ ಸಹಾಯಕ ಸಂಪಾದಕರಾಗಿ ಕೆ.ವಿ. ಪರಮೇಶ್ ಅವರಿಗೂ ಕೆ.ಎನ್. ಸುಬ್ರಮಣ್ಯ ಪ್ರಶಸ್ತಿ ಲಭಿಸಿದೆ. ಪರಮೇಶ್ ಅವರು ಈ ಹಿಂದೆ ‘ಶಕ್ತಿ’ಯಲ್ಲಿ ಉಪ ಸಂಪಾದಕಾರಿಗ ಸೇವೆ ಸಲ್ಲಿಸಿದ್ದಾರೆ. ಮಾರ್ಚ್ 2 ರಂದು ಶ್ರೀಕ್ಷೇತ್ರ ಸುತ್ತೂರು ಮಠ, ಮೈಸೂರಿನಲ್ಲಿ ನಡೆಯಲಿರುವ ಪತ್ರಕರ್ತರ 34ನೇ ರಾಜ್ಯ ಸಮ್ಮೇಳನದಲ್ಲಿ ವಿಘ್ನೇಶ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.