ಸುಂಟಿಕೊಪ್ಪ, ಫೆ. 26: ಕಂಬಿಬಾಣೆಯ ಶ್ರೀರಾಮ ಹಾಗೂ ಚಾಮುಂಡೇಶ್ವರಿ ರಂಗಮಂದಿರ ನಿರ್ಮಿಸಲು ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಭೂಮಿಪೂಜೆ ನೇರವೇರಿಸಿದರು. ಜಿ.ಪಂ. ಅನುದಾನದಲ್ಲಿ ಕಂಬಿಬಾಣೆಯ ಶ್ರೀರಾಮ ಹಾಗೂ ಚಾಮುಂಡೇಶ್ವರಿ ರಂಗ ಮಂದಿರ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ಡಾ. ಶಶಿಕಾಂತ ರೈ, ದೇವಸ್ಥಾನ ಅರ್ಚಕರು ಆಡಳಿತ ಮಂಡಳಿ ಸದಸ್ಯರು ಇದ್ದರು.