ಮಡಿಕೇರಿ, ಫೆ. 26: ಸಮೀಪದ ಹೆಬ್ಬೆಟ್ಟಗೇರಿಯ ಇಂದ್ರಪ್ರಸ್ಥ ನಗರದಲ್ಲಿರುವ ಸ್ವಾಮಿ ಕೊರಗಜ್ಜ ವಾರ್ಷಿಕೋತ್ಸª ಅದ್ಧೂರಿಯಾಗಿ ನಡೆಯಿತು. ದೇವಾಲಯದ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು.ಈ ಸಂದರ್ಭ ದೇವಾಲಯದ ಪ್ರಮುಖರಾದ ಚಂದ್ರು ಮಾತನಾಡಿ, ಪಾಷಾಣಮೂರ್ತಿಯ ಆಶೀರ್ವಚನದಿಂದ ಕೊರಗಜ್ಜ ದೇವಾಲಯ ನಿರ್ಮಿಸಿದ್ದೇವೆ. ಇದೀಗ ದೇವಾಲಯ ಒಂದು ವರ್ಷವನ್ನು ಪೂರೈಸಿದ್ದು, ಕೊಡಗಿನ ಜನರನ್ನು ದೈವ ಕಾಪಾಡಲಿ ಎಂದು ಆಶಿಸಿದರು. ವಾರ್ಷಿಕೋತ್ಸವದ ಪ್ರಯುಕ್ತ ಹಾಗೂ ನೂತನ ದೇವಾಲಯ ಕಟ್ಟಡದ ಕಳಶಾಭಿಷೇಕ, ಹೋಮ, ಹವನ ಸೇರಿದಂತೆ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.