ಮಡಿಕೇರಿ, ಫೆ. 26: ಕಾನೂನುಮಾಪದ ಶಾಸ್ತ್ರ ಇಲಾಖೆ ವತಿಯಿಂದ ತಾತ್ಕಾಲಿಕ ಸತ್ಯಾಪನೆ ಮುದ್ರೆ ಶಿಬಿರ ಆರಂಭಿಸಲಾಗಿದ್ದು, ಮಾ. 5 ರವರೆಗೆ ಬೈಪಾಸ್ ರಸ್ತೆ, ಗೋಣಿಕೊಪ್ಪಲಿನಲ್ಲಿ ನಡೆಯುತ್ತಿದೆ.
ವ್ಯಾಪಾರಸ್ಥರು ಉಪಯೋಗಿಸುವ ಅಳತೆ, ತೂಕ ಮತ್ತು ತೂಕದ ಸಾಧನಗಳನ್ನು ಹಾಜರುಪಡಿಸಿ ಸತ್ಯಾಪನೆ ಮುದ್ರೆ ಮಾಡಿಸಿಕೊಳ್ಳುವಂತೆ ಇಲಾಖೆ ನಿರೀಕ್ಷಕರು ಕೋರಿದ್ದಾರೆ.