ನಾಪೋಕ್ಲು, ಫೆ. 26: ಇಲ್ಲಿನ ಶ್ರೀ ಕಾವೇರಿ ಬೈವಾಡು ಸಮಿತಿ ವತಿಯಿಂದ 29ನೇ ವರ್ಷದ ಶ್ರೀ ಮೂಲ ಕಾವೇರಿ ಬೈವಾಡು ಕಾರ್ಯಕ್ರಮ ಮಾ. 3 ರಂದು ಸಂಜೆ ನಾಪೋಕ್ಲು ಹಳೇ ತಾಲೂಕು ಶ್ರೀ ಭಗವತಿ ದೇವಸ್ಥಾನದ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಪಾಡಿಯಮ್ಮಂಡ ಮುತ್ತಮ್ಮಯ್ಯ ತಿಳಿಸಿದ್ದಾರೆ.

ನಾಪೋಕ್ಲುವಿನ ಶ್ರೀ ಭಗವತಿ ದೇವಸ್ಥಾನದ ಸಮುದಾಯ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಾ ಶಿವÀರಾತ್ರಿ ಪÀ್ರಯುಕ್ತ ಮಾ. 4 ರ ಸೋಮವಾರ ಬೆಳಿಗ್ಗೆ 7 ಗಂಟೆಗೆ ವ್ರತÀ ಕೈಗೊಂಡ ಮಾಲಧಾರಿಗಳÀು ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಅಲ್ಲಿಂದ ಭಾಗಮಂಡಲ ಸಂಗಮದಲ್ಲಿ ಸ್ನಾನ ಮುಗಿಸಿ ಶ್ರೀ ಭಗಂಡೇಶ್ವರನ ದರ್ಶನ ಪಡೆದು ಪತ್ತಾಯಕ್ಕೆ ಅಕ್ಕಿ ಹಾಕಿ, 101 ಈಡುಕಾಯಿ ಒಡೆದು ಅಲ್ಲಿಂದ ತಲಕಾವೇರಿ ಸನ್ನಿಧಾನದಲ್ಲಿ ಶ್ರೀ ಕಾವೇರಿ ಮಾತೆಗೆ ಬೈವಾಡನ್ನು ಅಗಸ್ತೇಶ್ವರನ ಸನ್ನಿಧಾನದಲ್ಲಿ ಅರ್ಪಿಸುವದು. ತಲಕಾವೇರಿ ಕೊಳದಲ್ಲಿ ಪುಣ್ಯತೀರ್ಥ ಸ್ನಾನ ಮುಗಿಸಿ ಎಲ್ಲರೂ ಸೇರಿ ಸಾಮೂಹಿಕ ಕುಂಕುಮಾರ್ಚನೆಯನ್ನು ಮಾಡುವದು ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾವೇರಿ ಬೈವಾಡು ಕಾರ್ಯಕ್ರಮ ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಮಾಲೆ ಧರಿಸಿ, ವೃತ ಕೈಗೊಂಡು ಶ್ರೀ ಕ್ಷೇತ್ರದ ಅಭಿವೃದ್ಧಿ ಹಾಗೂ ಒಳಿತಿಗಾಗಿ ಸಹಕರಿಸಬೇಕಾಗಿ ಪಾಡಿಯಮ್ಮಂಡ ಮುತ್ತಮ್ಮಯ್ಯ ಮನವಿ ಮಾಡಿಕೊಂಡರು.

ಕೊಡಗು ಹಕ್ಕು ಸಂರಕ್ಷಣಾ ಸಮಿತಿ ಸಂಚಾಲಕ ಬಿದ್ದಾಟಂಡ ರೋಜಿ ಚಿಣ್ಣಪ್ಪ ಮಾತನಾಡಿ, ನಾಪೋಕ್ಲುವಿನ ಶ್ರೀ ಕಾವೇರಿ ಬೈವಾಡು ಸಮಿತಿ ವತಿಯಿಂದ ಮೂಲ ಕಾವೇರಿ ಬೈವಾಡು ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುವ ಮೂಲಕ ಭಕ್ತಿ ಸಮರ್ಪಣೆ ಮಾಡುತ್ತಿರುವದು ಶ್ಲಾಘನೀಯವಾಗಿದ್ದು, ಪ್ರಸಕ್ತ ವರ್ಷ ತಾವು ಮತ್ತು ತಮ್ಮ ಬೆಂಬಲಿಗರು ವ್ರತ ಕೈಗೊಂಡು ಮಾಲಧಾರಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಬೊಟ್ಟೋಳಂಡ ಗಣೇಶ, ಗುರುಸ್ವಾಮಿ ಕೇಲೆಟ್ಟೀರ ನಾಣಯ್ಯ, ಕೇಲೆಟ್ಟೀರ ಚಿತ್ರಾ ನಾಣಯ್ಯ ಉಪಸ್ಥಿತರಿದ್ದರು. -ದುಗ್ಗಳ