ನಾಪೋಕ್ಲು, ಫೆ. 26: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬಡವರಿಗೆ ಸಹಕಾರಿಯಾಗಿದ್ದು, ಎಲ್ಲಾ ಕಡೆಗಳಲ್ಲಿ ಉತ್ತಮ ನಿರ್ವಹಣೆ ಮಾಡಲು ಶಕ್ತವಾಗಿದೆ ಎಂದು ಟಿ.ಎಸ್. ನಾರಾಯಣ ಆಚಾರ್ ಹೇಳಿದರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಭಾಗಮಂಡಲ ವಲಯಕ್ಕೆ ಸಂಬಂಧಿಸಿದ ಕಾರ್ಯಕ್ಷೇತ್ರವಾರು ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅನುದಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 19 ಮಂದಿ ಕೃಷಿಕರಿಗೆ ಸುಮಾರು ರೂ. 65,500 ಮೊತ್ತದ ಅನುದಾನವನ್ನು ಬಾಳೆ ಕೃಷಿ, ಹಂದಿ ಸಾಕಾಣೆ, ಜೇನು ಕೃಷಿ, ಆಡು ಸಾಕಾಣೆ ಇನ್ನಿತರ ಉದ್ದೇಶಗಳಿಗೆ ವಿತರಣೆ ಮಾಡಲಾಯಿತು. ವೆಂಕಟರಮಣ ಸ್ವಾಗತಿಸಿದರು. ವಲಯದ ಮೇಲ್ವಿಚಾರಕ ಚೇತನ್ ಕಾರ್ಯಕ್ರಮ ನಿರೂಪಿಸಿದರು. ಕುಂದಚೇರಿ ಸೇವಾಪ್ರತಿನಿಧಿ ಅಣ್ಣಯ್ಯ ವಂದಿಸಿದರು.