ಸೋಮವಾರಪೇಟೆ, ಫೆ. 26: ಜಮ್ಮು ಕಾಶ್ಮೀರದ ಪುಲ್ವಮಾದಲ್ಲಿ ನಡೆದ ಭಯೋತ್ಪಾದಕರ ಧಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಸೋಮವಾರಪೇಟೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ದಿನದಂದು, ಪಟ್ಟಣದ ರೇಂಜರ್ ಬ್ಲಾಕ್‍ನಲ್ಲಿ ಪಟಾಕಿ ಸಿಡಿಸಿದ ಯೋಧರ ಸಾವನ್ನು ಸಂಭ್ರಮಿಸಿದ ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ಅರೆಸೇನಾ ಪಡೆಯ ನಿವೃತ್ತ ಯೋಧರ ಒಕ್ಕೂಟದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಯೋಧರ ಸಾವನ್ನು ಸಂಭ್ರಮಿಸಿ ಪಟಾಕಿ ಸಿಡಿಸಿರುವದು ಅಕ್ಷಮ್ಯವಾಗಿದ್ದು, ಇಂತಹ ಕ್ರಮ ಭಯೋತ್ಪಾದನೆಗೆ ಬೆಂಬಲ ನೀಡುವಂತಿದೆ. ಪಟಾಕಿ ಸಿಡಿದ ಆರೋಪಿ ಷಂಶುದ್ದೀನ್‍ನನ್ನು ಪೊಲೀಸರು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒಕ್ಕೂಟದ ಜಿಲ್ಲಾಧ್ಯಕ್ಷ ಯತೀಶ್ ಒತ್ತಾಯಿಸಿದ್ದಾರೆ. ದೇಶದ್ರೋಹದಂತಹ ಚಟುವಟಿಕೆಗಳಿಗೆ ಪೊಲೀಸ್ ಇಲಾಖೆ ತಕ್ಕ ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಸಂಘಟನೆಯ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಯತೀಶ್ ತಿಳಿಸಿದ್ದಾರೆ.