ಚೆಟ್ಟಳ್ಳಿ, ಫೆ. 26: ಚೆಟ್ಟಳ್ಳಿಯ ಚೇರಳ ಶ್ರೀ ಭಗವತಿ (ಪೊವ್ವೊದಿ) ವಾರ್ಷಿಕ ಉತ್ಸವವು ಮಾರ್ಚ್ 1 ರಿಂದ 3ರವರೆಗೆ ನಡೆಯಲಿದೆಂದು ದೇವಾಲಯದ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.

ಇಂದು ಪೂರ್ವಾಹ್ನ ತಕ್ಕಮುಖ್ಯಸ್ಥರು ಹಾಗೂ ಊರಿನವರು ಸೇರಿ ದೇವರ ದೀಪವನ್ನಿಟ್ಟು (ಬೊಳಕ್‍ಮರ) ಹಬ್ಬದ ಕಟ್ಟು ಕಾರ್ಯ ನೆರವೇರಿಸಿದರು. ಮಾರ್ಚ್ 1 ರಂದು ಪಟ್ಟಣಿ ಹಬ್ಬ, 2ರಂದು ಅಯ್ಯಪ್ಪಭನ, 3ರಂದು ದೊಡ್ಡಹಬ್ಬ ನಡೆಯಲಿದ್ದು, ಭಕ್ತಾದಿಗಳಿಗೆ ಆನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ