ಗೋಣಿಕೊಪ್ಪಲು,ಫೆ.26: ಮೈಸೂರು ಆಯುರ್ವೇದ ಮಹಾವಿದ್ಯಾಲಯ ವೈದ್ಯರ ತಂಡವು ತಾ. 28 ರಂದು ಪಾಲಿಬೆಟ್ಟ ಹಾಗೂ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಮಾಡು ಮತ್ತು ತಟ್ಟೆಕೆರೆ ಗಿರಿಜನ ಕಾಲೋನಿಗೆ ಭೇಟಿ ನೀಡಲಿದ್ದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಿದ್ದಾರೆ.
ಉದರ ಸಂಬಂಧಿ ರೋಗಗಳಾದ ಉಸಿರಾಟ ತೊಂದರೆ ಕೆಮ್ಮು, ದಮ್ಮು ಇತ್ಯಾದಿ ನರಗಳ ದೌರ್ಬಲ್ಯ ಇತ್ಯಾದಿ ಕಾಯಿಲೆಗಳಿಗೆ ತಪಾಸಣೆ ಹಾಗೂ ಔಷಧಿ ವಿತರಣೆ ಮಾಡಲಿದ್ದಾರೆ.