ಮಡಿಕೇರಿ, ಫೆ. 26: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಶ್ರೀ ಮಕ್ಕಿಶಾಸ್ತಾವು ಯುವಕ ಸಂಘ, ಬೇತುವಿನ ಸಹಯೋಗದಲ್ಲಿ ತಾ. 27 ರಂದು ಬೆಳಿಗ್ಗೆ 10.30 ಗಂಟೆಗೆ ನಾಪೋಕ್ಲುವಿನ ಬೇತು ಶಾಲೆ ಇಲ್ಲಿ ನಡೆಯಲಿರುವ ‘ಕೊಡವ ಭಾಷಿಕ ನಮ್ಮೆ’ ಏರ್ಪಡಿಸಲಾಗಿದೆ.
ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬೊಳ್ಳೆಪಂಡ ನಂಜುಂಡ, ಕೊಂಡಿರ ಪೂಣಚ್ಚ, ಚೋಕಿರ ಉತ್ತಯ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೊಡವ ಸಾಂಸ್ಕøತಿಕ ನೃತ್ಯಗಳ ಪ್ರದರ್ಶನ ಮತ್ತು ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟವಿರುತ್ತದೆ.