ಮಡಿಕೇರಿ, ಫೆ. 24: ಶ್ರೀಮಂಗಲ-ಹೇರ್ಮಾಡು ಗ್ರಾಮದ ಶ್ರೀ ಈಶ್ವರ ದೇವಾಲಯದಲ್ಲಿ ಮಾ. 3 ರಂದು ಸಂಜೆ 5.30 ರಿಂದ 7 ಗಂಟೆಯವರೆಗೆ ನೆರಪು ಉತ್ಸವ, ಮಾ. 4 ರಂದು ಮಹಾ ಶಿವರಾತ್ರಿ ಜಾತ್ರಾ ಉತ್ಸವ, ಬೆಳಿಗ್ಗೆ 4 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಾಮೂಹಿಕ ರುಧ್ರಾಭಿಷೇಕ ಪೂಜೆ, ಸಾಯಂಕಾಲ 5.30 ರಿಂದ ದೇವರ ಅವಭೃತ ಸ್ನಾನ, ಉತ್ಸವ ಮೂರ್ತಿಯನ್ನು ಹೊತ್ತು ನೃತ್ಯ ಪ್ರದಕ್ಷಿಣೆ, ರಾತ್ರಿ 10 ಗಂಟೆಯಿಂದ ಸಾಮೂಹಿಕ ವಸಂತ ಪೂಜೆ ನಂತರ ಸತ್ಯನಾರಾಯಣ ಪೂಜೆ ಹಾಗೂ ರಾತ್ರಿ ಜಾಗರಣೆ ಪ್ರಯುಕ್ತ ಮನೋರಂಜನೆ ಕಾರ್ಯಕ್ರಮ ನಡೆಯಲಿದೆ.

ಮಾ. 18 ರಂದು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಶತ ರುಧ್ರಾಭಿಷೇಕ ಪೂಜೆ ನಡೆಯಲಿದೆ. ಮಾ. 31 ರಂದು ಬೆಳಿಗ್ಗೆ 10 ಗಂಟೆಯಿಂದ 1 ಗಂಟೆಯವರೆಗೆ ಆಡಳಿತ ಮಂಡಳಿ ವಾರ್ಷಿಕ ಮಹಾಸಭೆ ಹಾಗೂ ಚುನಾವಣೆ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.