ಮಡಿಕೇರಿ, ಫೆ. 24: ಶ್ರೀಮಂಗಲ ಗ್ರಾಮದ ಕುರ್ಚಿಯ ಶ್ರೀ ಇರ್ಪು ರಾಮೇಶ್ವರ ದೇವಾಲಯದಲ್ಲಿ ಮಾರ್ಚ್ 1 ರಿಂದ 5 ರವರೆಗೆ ವಿವಿಧ ಧಾರ್ಮಿಕ ಪೂಜಾ ಕೈಕರ್ಯಗಳು ಜರುಗಲಿವೆ.

ಮಾ. 1 ರಂದು ಸಂಪ್ರದಾಯದ ಪ್ರಕಾರ ಸಂಜೆ 6 ಗಂಟೆಗೆ ಕೊಡಿಮರ ಪೂಜೆ ಹಾಗೂ ಪ್ರಾರಂಭೋತ್ಸವ ನಡೆಯಲಿದೆ. ಮಾ. 4 ರಂದು ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ರಾತ್ರಿ 10.30 ಗಂಟೆಯಿಂದ ನಡೆಸಲಾಗುವದು. ಮಾ. 5 ರಂದು ಜಾತ್ರಾ ಮಹೋತ್ಸವ ಮತ್ತು ದೇವರ ಅವಭೃತ ಸ್ನಾನ ಮಹೋತ್ಸವ ಹಾಗೂ ಮಧ್ಯಾಹ್ನ ಭಕ್ತರಿಗಾಗಿ ಅನ್ನದಾನ ಏರ್ಪಡಿಸಲಾಗಿದೆ ಎಂದು ದೇವಾಲಯ ಪ್ರಕಟಣೆ ತಿಳಿಸಿದೆ.