ಕುಶಾಲನಗರ, ಫೆ. 25: ಕುಶಾಲನಗರ ಗಣಪತಿ ದೇವಾಲಯದ ದೇವರಿಗೆ ಬೆಳ್ಳಿ ಕವಚ ಸಮರ್ಪಣಾ ಕಾರ್ಯ ನಡೆಯಿತು. ಸ್ಥಳೀಯ ಉದ್ಯಮಿಗಳಾದ ಎಸ್.ಎಲ್.ಎನ್. ಸಂಸ್ಥೆಯ ವಿಶ್ವನಾಥನ್ ದಂಪತಿಗಳು ದೇವಾಲಯದ ವಿಗ್ರಹದ ಪಾನಪೀಠ ಮತ್ತು ಬೆಳ್ಳಿ ಕವಚವನ್ನು ಅರ್ಪಿಸಿದರು.
ಸುಮಾರು 4.5 ಕೆಜಿ ತೂಕದ ಬೆಳ್ಳಿಯ ಪಾನಪೀಠ ಮತ್ತು ಅವತಾರವನ್ನು ದೇವಾಲಯದಲ್ಲಿ ವಿಶೇಷ ಪೂಜೆ ನಡೆಸುವ ಮೂಲಕ ಸ್ವೀಕರಿಸಲಾಯಿತು.
ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷರಾದ ವಿ.ಎನ್. ವಸಂತಕುಮಾರ್, ಗೌರವ ಕಾರ್ಯದರ್ಶಿ ಎಸ್.ಕೆ. ಶ್ರೀನಿವಾಸರಾವ್, ಖಜಾಂಚಿ ಎಂ.ಕೆ. ದಿನೇಶ್, ಸಮಿತಿ ಸದಸ್ಯರುಗಳಾದ ಎಸ್.ಎನ್. ನರಸಿಂಹಮೂರ್ತಿ, ಜಿ.ಎಲ್. ನಾಗರಾಜ್, ಎಂ.ವಿ. ಸತ್ಯನಾರಾಯಣ, ಪ್ರಧಾನ ಅರ್ಚಕರಾದ ಆರ್.ಕೆ.ನಾಗೇಂದ್ರ ಮತ್ತಿತರರು ಇದ್ದರು.