ನಾಪೋಕ್ಲು, ಫೆ. 25: ಎಮ್ಮೆಮಾಡು ಕ್ಷೇತ್ರ ಕೋಮು ಸೌಹಾರ್ದದ ನೆಲೆಬೀಡು ಎಂದು ಕಕ್ಕಿಂಜೆಯ ಅಬ್ದುಲ್ ರಶೀದ್ ಝೈನಿ ಅಲ್ ಕಾಮಿಲಿ ಸಖಾಫಿ ಅವರು ಬಣ್ಣಿಸಿದ್ದಾರೆ.ಎಮ್ಮೆಮಾಡು ಉರೂಸ್ ಪ್ರಯುಕ್ತ ಇಂದು ನಡೆದ ಸಾರ್ವಜನಿಕ ಸಮ್ಮೇಳನದಲ್ಲಿ ಕನ್ನಡ ಭಾಷಣಕಾರರಾಗಿ ಆಗಮಿಸಿ ಅವರು ಮಾತನಾಡಿದರು.

ಇಸ್ಲಾಂ ಧರ್ಮ ಹಿಂದಿನಿಂದಲೂ ಪ್ರೀತಿ, ಪ್ರೇಮ, ಶಾಂತಿಯನ್ನು ಜನರಲ್ಲಿ ಬೋಧಿಸುತ್ತಾ ಬಂದಿದೆ. ಇಸ್ಲಾಂನಲ್ಲಿ ಜಾತಿ, ಧರ್ಮಗಳ ಬಗ್ಗೆ ಭಿನ್ನಾಭಿ ಪ್ರಾಯವಿಲ್ಲ ಎಲ್ಲರೂ ಮಾನವರು ಎಂಬದನ್ನು ಮೊದಲು ನಾವು ತಿಳಿಯಬೇಕು ಎಂದರು.ಪವಾಡ ಪುರುಷರ ಹೆಸರಿನಲ್ಲಿ ಇಂದು ನಡೆಸಲ್ಪಡುವ ಉರೂಸ್‍ಗಳು ಪರಸ್ಪರ ಸ್ನೇಹ, ಪ್ರೀತಿ, ಸೌಹಾರ್ದತೆ ಯಿಂದ ನೆಮ್ಮದಿಯ ಶಾಂತಿಯುತ ಜೀವನಕ್ಕೆ ಮೆಟ್ಟಿಲಾಗಿದೆ ಎಂದರು. ಎಲ್ಲರೂ ಒಳಿತುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಶ್ರೇಷ್ಠವಾದ ಸಂದೇಶಗಳನ್ನು ಇಸ್ಲಾಂ ಜಗತ್ತಿಗೆ ಸಾರಿದೆ. ಅದರ ಸಾರವನ್ನು ತಿಳಿಯ ಬೇಕು. ಸಜ್ಜನರ ಸಹವಾಸದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.ಕಾರ್ಯಕ್ರಮವನ್ನು ಹಾಜಿ ಸಯ್ಯಿದ್ ನಾಸಿರ್ ತಂಞಳ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್

(ಮೊದಲ ಪುಟದಿಂದ) ಅಧ್ಯಕ್ಷ ಬಿ.ಎಂ. ಉಸ್ಮಾನ್ ಹಾಜಿ ವಹಿಸಿದ್ದರು.

ವೇದಿಕೆಯಲ್ಲಿ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರಹಿಮಾನ್, ಎ.ಡಿ.ಎಲ್.ಆರ್ ಷಂಶುದ್ದೀನ್, ಕೆ.ಎಂ.ಮಹಮ್ಮದ್ ಉಸ್ತಾದ್, ಅಬ್ದುಲ್ ರಶೀದ್ ಉಸ್ತಾದ್, ಹಾಮು ಹಾಜಿ, ಎರ್ಮು ಹಾಜಿ, ಎಮ್ಮೆಮಾಡು ತಂಞಳ್, ಎಮ್ಮೆಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನೆರೂಟ್ ಆಲಿ, ಹುಸೈನ್ ಸಖಾಫಿ, ಮತ್ತಿತರರು ಇದ್ದರು. ಉರೂಸ್ ಪ್ರಯುಕ್ತ ಸಾರ್ವಜನಿಕ ಅನ್ನದಾನ ನಡೆಯಿತು.

ಬಿಗಿ ಭದ್ರತೆ: ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ನೇತೃತ್ವದಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಂದೋಬಸ್ತ್‍ನಲ್ಲಿ ಓರ್ವ ಡಿವೈಎಸ್‍ಪಿ, 5 ವೃತ್ತ ನಿರೀಕ್ಷಕರು, 8 ಪಿ.ಎಸ್.ಐ, 15 ಎ.ಎಸ್.ಐ, 200 ಹೆಡ್‍ಕಾನ್ಸ್‍ಸ್ಟೆಬಲ್ ಮತ್ತು ಕಾನ್ಸ್‍ಟೇಬಲ್‍ಗಳು, 15 ಮಹಿಳಾ ಸಿಬ್ಬಂದಿ, 2 ಡಿಆರ್ ತುಕಡಿ, 2 ಕೆಎಸ್‍ಆರ್‍ಪಿ ತುಕಡಿ, ಬಾಂಬ್ ಪತ್ತೆ ದಳ ತಂಡದವರನ್ನು ಕರ್ತವ್ಯಕ್ಕೆ ನಿಯೋಜನೆಗೊಳಿಸಲಾಗಿತ್ತು.

-ಪಿ.ವಿ. ಪ್ರಭಾಕರ್