ಸೋಮವಾರಪೇಟೆ, ಫೆ. 24: ರಸ್ತೆ ಸುರಕ್ಷಾ ಸಪ್ತಾಹದ ಮೂಲಕ ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿಸುತ್ತಿರುವ ಪೊಲೀಸ್ ಇಲಾಖೆ, ಶಾಲಾ ಕಾಲೇಜು ಸೇರಿದಂತೆ ಸಾರ್ವಜನಿಕವಾಗಿಯೂ ಹಲವಷ್ಟು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಇದರೊಂದಿಗೆ ಸೋಮವಾರ ಪೇಟೆಯ ಪೊಲೀಸರು ಪ್ರತಿದಿನ ವಾಹನಗಳ ತಪಾಸಣಾ ಕಾರ್ಯ ವನ್ನು ಮಾಡುತ್ತಿದ್ದು, ಹಲವಷ್ಟು ಚಾಲಕರುಗಳಿಗೆ ದಂಡ ವಿಧಿಸು ತ್ತಿದ್ದಾರೆ.
ಬೆಳಗ್ಗಿನ ಸಮಯದಲ್ಲಿ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿ ಗಳನ್ನು ಕರೆದೊಯ್ಯುವ ಖಾಸಗಿ ವಾಹನಗಳು, ತೋಟಗಳಿಗೆ ಕಾರ್ಮಿಕರನ್ನು ಕರೆದೊಯ್ಯುವ ಪಿಕ್‍ಅಪ್, ಜೀಪ್ ಸೇರಿದಂತೆ ದ್ವಿಚಕ್ರ ವಾಹನಗಳ ತಪಾಸಣಾ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.
ಶಾಲೆಗಳಿಗೆ ಮಕ್ಕಳನ್ನು ಕರೆದೊ ಯ್ಯುವ ವಾಹನಗಳ ದಾಖಲಾತಿ ಪರಿಶೀಲನೆ ನಡೆಸಿದ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಮತ್ತು ಸಿಬ್ಬಂದಿಗಳು, ನಿಗದಿಗಿಂತ ಹೆಚ್ಚಿನ ಜನರನ್ನು ಸಾಗಾಟಗೊಳಿಸುತ್ತಿದ್ದ ಹಲವು ಪಿಕ್‍ಅಪ್ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ದಂಡ ವಿಧಿಸಿ, ಎಚ್ಚರಿಕೆ ನೀಡಿದರು.
ಕಾಫಿ ತೋಟಗಳಲ್ಲಿ ಇದೀಗ ಕಾಫಿ ಹಾಗೂ ಕರಿಮೆಣಸು ಕೊಯ್ಲು ಕೆಲಸ ನಡೆಯುತ್ತಿದ್ದು, ಸಣ್ಣ ಬೆಳೆಗಾರರಿಗೆ ಕಾರ್ಮಿಕರನ್ನು ಸಾಗಿಸಲು ವಾಹನದ ಸೌಕರ್ಯ ಇಲ್ಲ. ಹೀಗಾಗಿ ಪಿಕ್ ಅಪ್ ವಾಹನಗಳಲ್ಲಿ ಬಾಡಿಗೆ ಆಧಾರದ ಮೇಲೆ ಕಾರ್ಮಿಕರನ್ನು ಸಾಗಿಸ ಲಾಗುತ್ತಿದ್ದು, ಪೊಲೀಸರು ಇಂತಹ ವಾಹನಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವದು ಪಿಕ್‍ಅಪ್ ಚಾಲಕರಿಗೆ ತೊಂದರೆಯಾಗಿದೆ ಎಂದು ಹಲವಷ್ಟು ಚಾಲಕರು ಪೊಲೀಸರೊಂದಿಗೆ ಅಳಲು ತೋಡಿಕೊಂಡರು.