ಮಡಿಕೇರಿ, ಫೆ. 24: ವೀರಾಜಪೇಟೆ ತಾಲೂಕಿನ ಟಿ. ಶೆಟ್ಟಿಗೇರಿಯ ಶ್ರೀ ಸಿದ್ದಾಶ್ರಮದಲ್ಲಿ ಮಾ. 4 ರಂದು ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ನಿತ್ಯಪೂಜೆ, 8 ಗಂಟೆಯಿಂದ 8.30 ರವರೆಗೆ ಪಂಚಾಕ್ಷರಿ ಭಜನೆ 9 ರಿಂದ 10 ಗಂಟೆಗೆ ಶ್ರೀ ಮಹಾಗಣಪತಿ ಹೋಮ, 10 ರಿಂದ 11 ಗಂಟೆಯವರೆಗೆ ಶಿವಲಿಂಗಕ್ಕೆ ಬಿಲ್ವರ್ಚನೆ ಮತ್ತು ಪಂಚಾಮೃತ ರುದ್ರಾಭಿಷೇಕ ಮತ್ತು ಪ್ರಾರ್ಥನೆ ಭಜನೆ 11.30 ರಿಂದ ಗೋಣಿಕೊಪ್ಪಲಿನ ಭಗವಾನ್‍ಗೆ ಶ್ರೀ ಸತ್ಯಸಾಯಿ ಬಾಬ ಭಕ್ತ ವೃಂದದವರಿಂದ ಭಜನೆ ಮತ್ತು ಸಂಕೀರ್ತನೆ 12.30 ಕ್ಕೆ ಮಹಾಮಂಗಳಾರತಿ 1 ಗಂಟೆಗೆ ಅನ್ನಸಂತರ್ಪಣೆ ನಡೆಸಲಾಗುವದು ಎಂದು ಆಡಳಿತ ಮಂಡಳಿ ತಿಳಿಸಿದೆ.