ಶನಿವಾರಸಂತೆ, ಫೆ. 25: ತಾಯಿಯ ತವರು ಮನೆಗೆ ಅಜ್ಜ - ಅಜ್ಜಿಯನ್ನು ನೋಡಲು ಹೋದ ಮೊಮ್ಮಗನಿಗೆ ಅಜ್ಜನೇ ಚಾಕುವಿನಿಂದ ಇರಿದು ಗಾಯಪಡಿಸಿದ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೊಡ್ಲಿಪೇಟೆ ಹೋಬಳಿಯ ಕ್ಯಾತೆ ಗ್ರಾಮದ ನಿವಾಸಿ ಆಕಾಶ್ ಭಾನುವಾರ ಹೆಮ್ಮನೆ ಗ್ರಾಮದಲ್ಲಿರುವ ತಮ್ಮ ತಾಯಿಯ ತವರು ಮನೆಗೆ ಅಜ್ಜ ದೊಡ್ಡಯ್ಯ, ಅಜ್ಜಿ ಸೋಮಮ್ಮ, ಚಿಕ್ಕಪ್ಪ- ಚಿಕ್ಕಮ್ಮ, ಮಕ್ಕಳನ್ನು ನೋಡಲು ಹೋಗಿದ್ದ ವೇಳೆ ಘಟನೆ ನಡೆದಿದೆ. ಅಜ್ಜ ದೊಡ್ಡಯ್ಯನಿಗೆ ಕುಡಿತದ ಚಟವಿದ್ದು, ರಾತ್ರಿ ಅಜ್ಜಿಯೊಂದಿಗೆ ಜಗಳವಾಡಿ ಚಾಕುವಿನಿಂದ ಇರಿಯಲು ಮುಂದಾಗಿ ತಡೆಯಲು ಹೋದ ಆಕಾಶ್‍ನ ಹೊಟ್ಟೆಯ ಭಾಗಕ್ಕೆ ಇರಿಯಲಾಗಿದೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಶನಿವಾರಸಂತೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.