ನಾಪೆÇೀಕ್ಲು, ಫೆ. 23: ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯನ್ನು ಕೊಲೆಗೈದು ಚಿನ್ನಾಭರಣ ದೋಚಿರುವ ದುಷ್ಕøತ್ಯ ನಾಪೆÇೀಕ್ಲು ಪೆÇಲೀಸ್ ಠಾಣಾ ವ್ಯಾಪ್ತಿಯ ಕುಂಬಳದಾಳು ಗ್ರಾಮದಲ್ಲಿ ನಡೆದಿದೆ.ಗ್ರಾಮದ ಕರ್ಣಯ್ಯನ ದಿ. ಉತ್ತಪ್ಪ ಅವರ ಪತ್ನಿ ರಾಧಾ (74) ಕೊಲೆಯಾದ ದುರ್ದೈವಿ ವೃದ್ಧೆ. ಇವರಿಗೆ ಮೂವರು ಮಕ್ಕಳಿದ್ದು, ಹಿರಿಯ ಮಗ ಧನಪಾಲ್ ಮೈಸೂರಿನಲ್ಲಿ ಕೆಲಸದ ನಿಮಿತ್ತ ವಾಸವಾಗಿದ್ದು, ಮಗಳನ್ನು ವಿವಾಹ ಮಾಡಿಕೊಡಲಾಗಿದೆ. ಮಗಳು ಇವರ ಮನೆಯಿಂದ 2 ಕಿ.ಮೀ ದೂರದಲ್ಲಿ ವಾಸವಾಗಿದ್ದಾರೆ. ಮೂರನೇ ಮಗ ನಂದಕುಮಾರ್ ಬೆಂಗಳೂರಿನಲ್ಲಿ ನೆಲೆಸಿದ್ದು, ರಾಧಾ ಮಾತ್ರ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದರು.

ನಿನ್ನೆ ಬೆಳಿಗ್ಗೆ ಮಗ ನಂದಕುಮಾರ್ ತಮ್ಮ ತಾಯಿಗೆ ಮೊಬೈಲ್ ಕರೆ ಮಾಡಿದಾಗ ಸ್ವೀಕರಿಸದ ಹಿನ್ನೆಲೆಯಲ್ಲಿ ಪಕ್ಕದ ಮನೆಗೆ ಈ ಬಗ್ಗೆ ತಿಳಿಸಿದ್ದಾರೆ. ಪಕ್ಕದ ಮನೆ ಲೀಲಾವತಿ ತನ್ನ ಮೈದುನ ಚಿದಾನಂದ ಮೂಲಕ ರಾಧಾ ಮಗಳು ಜಾನ್ಸಿ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ಆ ಮೇರೆಗೆ ಬಂದು ನೋಡಲಾಗಿ ಜಾನ್ಸಿ ಮನೆ ಮುಂಬಾಗಿಲು ಮುಚ್ಚಿದ್ದು, ಹಿಂಬಾಗಿಲು ತೆರೆದಿತ್ತು. ಒಳಗೆ ಹೋಗಿ ನೋಡಿದಾಗ ಕೋಣೆಯ ಮಂಚದ ಮೇಲೆ ರಾಧಾ ಮಲಗಿದ್ದಲ್ಲೇ ಶವವಾಗಿದ್ದು, ಮೂಗಿನಿಂದ ರಕ್ತ ಬರುತ್ತಿರುವದು ಗೋಚರಿಸಿದೆ. ಕೋಣೆಯ ಬೀರುವಿನಲ್ಲಿ ಇಟ್ಟಿದ್ದ ಅಂದಾಜು 100 ಗ್ರಾಂ ಚಿನ್ನಾಭರಣ ಕಳವಾಗಿರುವದಾಗಿ ತಿಳಿದು ಬಂದಿದೆ. ಈ ಬಗ್ಗೆ ನಾಪೆÇೀಕ್ಲು ಪೆÇಲೀಸ್ ಠಾಣೆಗೆ ಮೃತೆಯ ಅಳಿಯ ಹೊದವಾಡ ಗ್ರಾ. ಪಂ. ಅಧ್ಯಕ್ಷ ಕುಲ್ಲಚಂಡ ದಿನೇಶ್ ದೂರು ನೀಡಿದ್ದು, ಸ್ಥಳಕ್ಕೆ ಡಿವೈಎಸ್‍ಪಿ ಸುಂದರ್‍ರಾಜ್, ಮಡಿಕೇರಿ ವೃತ್ತನಿರೀಕ್ಷಕ ಸಿದ್ದಯ್ಯ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೇಲ್ನೋಟಕ್ಕೆ ಕತ್ತು ಹಿಸುಕಿ ಕೊಲೆ ಮಾಡಿರುವದಾಗಿ ಕಂಡು ಬಂದಿದ್ದು, ಮರಣೋತ್ತರ ಪರೀಕ್ಷೆಯ ನಂತರವೇ ಮಾಹಿತಿ ಲಭ್ಯವಾಗಲಿದೆ. ಮಡಿಕೇರಿ ಅಪರಾಧ ಪತ್ತೆದಳ, ನಾಪೆÇೀಕ್ಲು ಪೆÇಲೀಸರು ಬಿರುಸಿನ ಕಾರ್ಯಾಚರಣೆ ನಡೆಸುತಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. - ಪಿ.ವಿ.ಪ್ರಭಾಕರ್