ಶ್ರೀಮಂಗಲ, ಪೆ. 23: ಕೊಡವ ಸಂಸ್ಕøತಿ ಹಾಗೂ eನಪದ ಕಲೆಯನ್ನು ಉಳಿಸಿ ಬೆಳಸುವ ಉದ್ದೇಶದಿಂದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರನ್ವಯ ಕೊಡವ ಸಂಸ್ಕೃತಿಯ ಭಾಗವಾದ ಪುದಿಯಕ್ಕಿ ಕೂಳುಂಬೊ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದಲ್ಲಿ ಆಟ್‍ಪಾಟ್ ಪಡಿಪು ಯೋಜನೆಯಡಿ ಕಳೆದ ಒಂದು ತಿಂಗಳಿನಿಂದ ಮಕ್ಕಳು ಹಾಗೂ ಸಾರ್ವಜನಿಕ ಮಹಿಳೆಯರಿಗೆ ಉಮ್ಮತ್ತಾಟ್, ಪುರುಷರಿಗೆ ಪುತ್ತರಿ ಕೋಲಾಟ್, ಬೊಳಕಾಟ್, ಇತ್ಯಾದಿ ಜನಪದ ನೃತ್ಯಗಳನ್ನು ಕಲಿಸುತ್ತಿದ್ದು ಇದರ ಸಮಾರೋಪ ಸಮಾರಂಭ ತಾ. 25ರ ಸೋಮವಾರ ಪೂರ್ವಾಹ್ನ ಹತ್ತು ಗಂಟೆಗೆ ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಸಭಾಂಗಣದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜ, ಟಿ. ಶೆಟ್ಟಿಗೇರಿ ಸಾರ್ವಜನಿಕ ಗೌರಿ ಗಣೇಶ ಸೇವಾ ಸಮಿತಿ, ಸಂಭ್ರಮ ಪೊಮ್ಮಕ್ಕಡ ಕ್ರೀಡೆ- ಸಾಂಸ್ಕøತಿಕ ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಡೆಯಲಿದೆ.

ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ, ನಿವೃತ ಮುಖ್ಯೋಪಾದ್ಯಾಯರಾದ ಚೊಟ್ಟೆಯಾಂಡಮಾಡ ಎಸ್. ಚೆಂಗಪ್ಪ, ಮಾಜಿ ಜಿಲ್ಲಾ ಪಂಚಾಯ್ತಿ ಸಧಸ್ಯ ಕೊಂಡಿಂಜಮ್ಮನ ಎಂ. ಬಾಲಕೃಷ್ಣ, ಆಟ್‍ಪಾಟ್ ಪಡಿಪುಕಾರರಾದ ಕೊಡವ ಜಾನಪದ ಆಟ್‍ಪಾಟ್ ತಜ್ಞ ಕಾಳಿಮಾಡ ಎಂ. ಮೋಟಯ್ಯ ಭಾಗವಹಿಸಲಿದ್ದಾರೆ.

ಈ ಸಂದರ್ಭ ದಿನದ ಮಹತ್ವಕ್ಕೆ ಸಂಬಂದಿಸಿದಂತೆ ‘ಕೊಡವ ಸಂಸ್ಕøತಿಲ್ ಪುದಿಯಕ್ಕಿ ಕೂಳುಂಬೊ ಪದ್ದತಿ’ ಎಂಬ ವಿಷಯದ ಬಗ್ಗೆ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯರವರಿಂದ ವಿಚಾರ ಮಂಡನೆ, ‘ಪಟ್ಟೋಲೆ ಪಳಮೆ’ ಪುಸ್ತಕದ 7ನೇ ಮುದ್ರಣ ಪ್ರತಿಯ ಬಿಡುಗಡೆ ಹಾಗೂ ಕೊಡವ ಭಾಷೆ, ಸಾಹಿತ್ಯ, ಸಂಸ್ಕøತಿಯ ಉಳಿಕೆ ಹಾಗೂ ಬೆಳವಣಿಗೆಗೆ ಶ್ರಮಿಸುತ್ತಿರುವ ಮಾಯಣಮಾಡ ಎಂ. ಪೂಣಚ್ಚ, ಕೈಬಿಲೀರ ಪಾರ್ವತಿ ಭೋಪಯ್ಯ, ಚೆಟ್ಟಂಗಡ ರವಿ ಸುಬ್ಬಯ್ಯ ಅವರನ್ನು ಸನ್ಮಾನ ಮÁಡಲಾಗುವುದು.

ಕೊಡವ ಭಾಷೆ, ಸಂಸ್ಕøತಿಯ ಅಭಿಮಾನಿಗಳೆಲ್ಲರು ಭಾಗವಹಿಸಬೇಕಾಗಿ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಕೋರಿದ್ದಾರೆ.