ಗೋಣಿಕೊಪ್ಪ ವರದಿ, ಫೆ. 23: : ತಿತಿಮತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಂಭ್ರಮ, ಸಡಗರದ ಮೂಲಕ ಚಾಲನೆ ನೀಡಲಾಯಿತು.

ಶತಮಾನೋತ್ಸವದ ಮೊದಲ ದಿನವಾದ ಶನಿವಾರದಂದು ತಿತಿಮತಿ ಭಾಗದ ಪ್ರಾಥಮಿಕ, ಪ್ರೌಡ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು, ಹಳೇಯ ವಿದ್ಯಾರ್ಥಿ, ಸಾರ್ವಜನಿಕರು ಹಾಗೂ ಅಧ್ಯಾಪಕ ವೃಂದದವರು ಪ್ರತ್ಯೇಕವಾಗಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಶತಮಾನೋತ್ಸವ ಆಚರಣೆಗೆ ಮೆರಗು ನೀಡಿದರು. ಸುಮಾರು 30 ಬಗೆಯ ಕ್ರೀಡೆಗಳು ನಡೆದವು.

ಕ್ರೀಡಾಜ್ಯೋತಿ ಸ್ವೀಕರಿಸಿ, ಧ್ವಜಾರೋಹಣ ನೆರವೇರಿಸುವ ಮೂಲಕ ಅಂತರಾಷ್ಟ್ರೀಯ ಕ್ರೀಡಾಪಟು ಪಾರುವಂಗಡ ಸಿ. ಸುಗುಣ ಪೊನ್ನಪ್ಪ ಕ್ರೀಡಾಕೂಟ ಉದ್ಘಾಟಿಸಿದರು.

ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿ ಗಮನ ಸೆಳೆದರು. ಮಾಜಿ ರಾಷ್ಟ್ರೀಯ ಆಟಗಾರ ಚೆಪ್ಪುಡೀರ ಕಾರ್ಯಪ್ಪ, ನೌಕಾಪಡೆ (ನಿ) ಕಮಾಂಡೊ ಸಿ.ಎಂ ಬೆಳ್ಯಪ್ಪ ಬಹುಮಾನ ವಿತರಿಸಿದರು.

ಈ ಸಂದರ್ಭ ಕಾರ್ಯಧ್ಯಕ್ಷ ಚೆಪ್ಪುಡೀರ ರಾಮಕೃಷ್ಣ, ಉಪಾಧ್ಯಕ್ಷ ಶಿವಕುಮಾರ್, ಖಜಾಂಜಿ ಫಿಲೋಮಿನಾ, ಪದಾಧಿಕಾರಿಗಳಾದ ಮನು ನಂಜಪ್ಪ, ಮಹೇಶ್, ಕೃಷ್ಣ, ಮಂಜುಳಮ್ಮ ಗಣೇಶ್, ಮುಖ್ಯಶಿಕ್ಷಕಿ ಹೆಚ್. ಎಂ. ಪಾರ್ವತಿ, ಜಿ.ಪಂ. ಸದಸ್ಯೆ ಪಿ.ಆರ್. ಪಂಕಜ ಉಪಸ್ಥಿತರಿದ್ದರು.

ತಾ. 24ರಂದು (ಇಂದು) ಭಾನುವಾರ ಶತಮೋತ್ಸವದ ಮುಖ್ಯ ಕಾರ್ಯಕ್ರಮ ನಡೆಯಲಿದ್ದು, ಬೆ. 9.30 ಕ್ಕೆ ಶೋಭಾಯಾತ್ರೆ ಮೂಲಕ ಆರಂಭಗೊಳ್ಳಲಿದೆ. ಈ ಸಂದರ್ಭ ಸಭಾ ಕಾರ್ಯಕ್ರಮ, ಶಾಲಾ ವರದಿ, ಸ್ಮರಣ ಸಂಚಿಕೆ ಬಿಡುಗಡೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ನಡೆಯಲಿದೆ.

ಸಭಾ ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿ ಗೌರವ ಅಧ್ಯಕ್ಷೆ ಸುಮ ವಸಂತ್, ಶಾಸಕ ಕೆ.ಜಿ. ಬೋಪಯ್ಯ, ವಿಶೇಷ ಅತಿಥಿಗಳಾಗಿ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ,ವಿಧಾನ ಪರಿಷತ್ ಶಿಕ್ಷಕರರುಗಳಾದ ಕ್ಷೇತ್ರ ಸದಸ್ಯ ಎಸ್. ಎಲ್. ಬೋಜೇಗೌಡ, ನೈರುತ್ಯ ಪದವಿಧರ ಕಷೇತ್ರದ ಸದಸ್ಯ ಆಯನೂರು ಮಂಜುನಾಥ್, ಜಿ. ಪಂ. ಅಧ್ಯಕ್ಷ ಬಿ.ಎ. ಹರೀಶ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ, ಜಿ. ಪಂ. ಸದಸ್ಯೆ ಪಿ.ಆರ್. ಪಂಕಜ, ತಾ.ಪಂ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ತಾ. ಪಂ. ಸದಸ್ಯೆ ಆಶಾ ಜೇಮ್ಸ್, ಜಿಲ್ಲಾಧಿಕಾರಿ ನಿಸ್ ಕಣ್ಮಣಿ ಜಾಯ್, ಸಿಇಒ ಲಕ್ಷ್ಮಿಪ್ರಿಯಾ, ಶಿಕ್ಷಣ ಇಲಾಖೆ ಉಪನಿರ್ದೇಶಕ ಪೆರಿಗ್ರಿನ್ ಮಚಾಡೋ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಬೀಳಗಿ, ಶತಮಾನೋತ್ಸವ ಸಮಿತಿ ಕಾರ್ಯಧ್ಯಕ್ಷ ಚೆಪ್ಪುಡೀರ ರಾಮಕೃಷ್ಣ ಪಾಲ್ಗೊಳ್ಳಲಿದ್ದಾರೆ.

-ಸುದ್ದಿಪುತ್ರ