ನಾಪೆÇೀಕ್ಲು, ಫೆ. 23: ಕೊಡಗಿನ ಕುಲದೈವ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಸುಮಾರು ರೂ. 33 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅನ್ನಛತ್ರ ಕಟ್ಟಡಕ್ಕೆ ಹಿರಿಯರಾದ ಪರದಂಡ ಚಂಗಪ್ಪ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಭಕ್ತಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ಉಪಾಧ್ಯಕ್ಷ ಪರದಂಡ ಡಾಲಿ, ಕಾರ್ಯದರ್ಶಿ ಬೊಳಂದಂಡ ಲಲಿತಾ ನಂದಕುಮಾರ್, ದೇವಳ ಸಮಿತಿ ಸದಸ್ಯ ಕಲಿಯಂಡ ಸಂಪ ಅಯ್ಯಪ್ಪ, ದೇವಳದ ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಪ್ಪ ಸೇರಿದಂತೆ ಎಲ್ಲಾ ಸದಸ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.