ಮಡಿಕೇರಿ, ಫೆ. 23: ಗೋಣಿಕೊಪ್ಪಲಿನಲ್ಲಿ ತಾ. 25ರಂದು ಸೇವ್ ಕೊಡಗು ವೇದಿಕೆ ಹಮ್ಮಿಕೊಂಡಿರುವ ರ್ಯಾಲಿಯ ವಿರುದ್ಧ ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಪಶ್ಚಿಮಘಟ್ಟ ಅರಣ್ಯ ಪ್ರದೇಶವನ್ನು ರಕ್ಷಿಸಬೇಕೆನ್ನುವ ನಿರ್ದೇಶನವಿದೆ. ಇದರ ವಿರುದ್ಧವಾಗಿರುವ ಹೆದ್ದಾರಿ ಮತ್ತು ರೈಲು ಮಾರ್ಗದ ಪರವಾಗಿ ಹೋರಾಟ ನಡೆಸುವದು ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.